ಹೊಸ ದಿಗಂತ ಆನ್ ಲೈನ್ ಡೆಸ್ಕ್:
70 ವರ್ಷದ ಅಜ್ಜಿಯೊಬ್ಬರು ತಮ್ಮ ಮೊದಲ ಮಗುವಿಗೆ ಜನ್ಮ ನೀಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇಡೀ ವಿಶ್ವದಲ್ಲೇ ಮಗುವಿಗೆ ಜನ್ಮ ನೀಡಿದ ಅತ್ಯಂತ ಹಿರಿಯ ಮಹಿಳೆಯೆಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.
ಮೊಮ್ಮಕ್ಕಳು, ಮರಿಮಕ್ಕಳನ್ನು ಆಟವಾಡಿಸಿಕೊಂಡಿರಬೇಕಾದ ವಯಸ್ಸಿನಲ್ಲಿ ಇವರು ಮೊದಲ ಮಗುವಿಗೆ ತಾಯಿಯಾಗಿದ್ದಾರೆ.
ಗುಜರಾತ್ ರಾಜ್ಯದ ಕಚ್ನ 70 ವರ್ಷದ ಜಿವನ್ಬೆನ್ ರಬಾರಿ ಮತ್ತು ಆಕೆಯ ಪತಿ 75 ವರ್ಷದ ವಾಲ್ಜಿಭಾಯಿ ರಬಾರಿಗೆ ಮಗು ಜನಿಸಿದೆ. ಆ ಮಗುವಿಗೆ ಲಾಲೋ ಎಂದು ಹೆಸರಿಡಲಾಗಿದೆ. ಸಿಸೇರಿಯನ್ ಮೂಲಕ ಮಗುವನ್ನು ಡೆಲಿವರಿ ಮಾಡಲಾಗಿದೆ. ಮದುವೆಯಾಗಿ 45 ವರ್ಷಗಳಾದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಬುಜ್ನ ಐವಿಎಫ್ ಸೆಂಟರ್ ಮೂಲಕ ಗರ್ಭ ಧರಿಸಿರುವ ಇವರು ಇದಕ್ಕೂ ಮೊದಲು ಕೆಲವು ದಶಕಗಳಿಂದ ಮಗುವಿಗಾಗಿ ಪ್ರಯತ್ನಿಸುತ್ತಿದ್ದರು.
ಸಂಬಂಧಿಕರ ಮೂಲಕ ಐವಿಎಫ್ ಬಗ್ಗೆ ತಿಳಿದ ನಂತರ ಅವರು ಬುಜ್ನಲ್ಲಿ ಹರ್ಶ್ ಐವಿಎಫ್ ಕೇಂದ್ರವನ್ನು ನಡೆಸುತ್ತಿರುವ ಡಾ ನರೇಶ್ ಭಾನುಶಾಲಿಯನ್ನು ಸಂಪರ್ಕಿಸಿದರು. ಆಗ ಆಕೆಯ ರಕ್ತದೊತ್ತಡ ಹೆಚ್ಚಾಗಿತ್ತು ಮತ್ತು ಗರ್ಭಾವಸ್ಥೆಯ ಎಂಟನೇ ತಿಂಗಳಲ್ಲಿ ನಾವು ಮಗುವನ್ನು ಸಿ-ಸೆಕ್ಷನ್ ಮೂಲಕ ಹೆರಿಗೆ ಮಾಡಬೇಕಾಯಿತು ಎಂದು ಡಾ. ಭಾನುಶಾಲಿ ಹೇಳಿದ್ದಾರೆ.
ಅತ್ಯಂತ ಹಿರಿಯ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುವ ಮೂಲಕ ಸ್ಪೇನ್ನ 66 ವರ್ಷದ ಕೀರ್ತಿ ಮರಿಯಾ ಡೆಲ್ ಕಾರ್ಮೆನ್ ಬೌಸಾಡಾ ಲಾರಾ ವಿಶ್ವ ದಾಖಲೆ ಮಾಡಿದ್ದರು. ಅವರಿಗೆ ಅವಳಿ ಗಂಡು ಮಕ್ಕಳಾಗಿತ್ತು. ಇದೀಗ ಆ ದಾಖಲೆ 70 ವರ್ಷದ ಜಿವನ್ಬೆನ್ ರಬರಿ ಅವರದ್ದಾಗಿದೆ.