Wednesday, August 10, 2022

Latest Posts

ಕೊಟ್ಟಿಗೆಯಲ್ಲಿ ಕೂಡಿಹಾಕಿದ ಮೇಕೆಗಳ ಅನುಮಾನಾಸ್ಪದ ಸಾವು

ಹೊಸ ದಿಗಂತ ವರದಿ, ಶ್ರೀರಂಗಪಟ್ಟಣ:

ಕೊಟ್ಟಿಗೆಯಲ್ಲಿ ಕೂಡಿಹಾಕಿದ್ದ ಮೇಕೆಗಳ ಹಿಂಡಿನಲ್ಲಿ 21 ಮೇಕೆಗಳು ಅನುಮಾನಸ್ಪದವಾಗಿ ಮೃತಪಟ್ಟು 30 ಮೇಕೆಗಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಶನಿವಾರ ಮುಂಜಾನೆ ಘಟನೆ ನಡೆದಿದೆ.
ಗ್ರಾಮದ ಶ್ರೀನಿವಾಸ್ ಎಂಬುವರಿಗೆ ಸೇರಿದ್ದ 51 ಮೇಕೆಗಳು ಅವರ ಮನೆಯ ಕೊಟ್ಟಿಗೆಯಲ್ಲಿ ಮಲಗಿದ್ದ ವೇಳೆ ಅನುಮಾನಸ್ಪದವಾಗಿ ಒದ್ದಾಡಿ ಮೃತಪಟ್ಟಿವೆ. ಎಂದಿನಂತೆ ಜಮೀನು ಪ್ರದೇಶದಿಂದ ಮೇವು ಮೇಯಿಸಿಕೊಂಡು ಬಂದಿದ್ದ ಎಲ್ಲಾ ಮೇಕೆಗಳನ್ನು ಕಳೆದ ಶುಕ್ರವಾರ ರಾತ್ರಿ ಕೊಟ್ಟಿಗೆಯಲ್ಲಿ ಕೂಡಿ ಹಾಕಿ ನಿದ್ರೆಗೆ ಜಾರಿದ್ದ ರೈತ ಶ್ರೀನಿವಾಸ್, ಶನಿವಾರ ಮುಂಜಾನೆ 4 ರ ವೇಳೆ ನೋಡಿದಾಗ ಒಂದೊರಹಿಂದೆ ಒಂದಂತೆ ಮೇಕೆಗಳು ಹೊಟ್ಟೆ ಉಬ್ಬರಿಸಿ ತೀವ್ರ ಅಸ್ವಸ್ಥಗೊಂಡು ಅಸುನೀಗಿವೆ.
ಇದರಿಂದ ಅತಂಕಗೊಂಡ ರೈತ ಶ್ರೀನಿವಾಸ್ ತಕ್ಷಣ ಪಾಲಹಳ್ಳಿ ಸಂಗೋಪನಾ ಇಲಾಖೆ ವೈದ್ಯ ಡಾ.ರಮಿತ್ ಅವರಿಗೆ ವಿಷಯ ತಿಳಿಸಿದ್ದು, ತಕ್ಷಣ ಪಶುವೈದ್ಯ ಭೇಟಿ ನೀಡಿ ಹಲವು ಮೇಕೆಗಳಿಗೆ ಚಿಕಿತ್ಸೆ ನೀಡಿ ಅವುಗಳ ರಕ್ಷಣೆಗೆ ಮುಂದಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೆಳಗ್ಗೆ 6ರ ವೇಳೆಗೆ ಪಶು ಸಂಗೋಪನಾ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಡಾ.ಶಿವಲಿಂಗೇಗೌಡ, ಬೆಳಗೊಳ ಗ್ರಾಮದ ವೈದ್ಯರಾದ ಆನಂದ್ ಕುಮಾರ್ ಭೇಟಿ ನೀಡಿ ಹೆಚ್ಚುವರಿ ಚಿಕಿತ್ಸೆ ನೀಡುವ ಜೊತೆಗೆ ಪರಿಶೀಲನೆ ನಡೆಸಿದ್ದಾರೆ. ನಿಗೂಢವಾಗಿ ಮೇಕೆಗಳು ಸಾವಿಗೀಡಾಗಿರುವ ಹಿನ್ನಲೆ ಅದರ ಕಾರಣ ತಿಳಿಯಲು ಮೇಕೆಗಳು ಸೇವಿಸಿದ ಆಹಾರ ಅಥವಾ ಯಾರಾದರೂ ವಿಷಕಾರಿ ಪದಾರ್ಥ ಸೇವಿಸಿರಬುಹುದೆಂಬ ಅನುಮಾನದಿಂದ ಮೇಕೆಗಳ ಕಳೆಬರಹವನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.
ಕೊಟ್ಟಿಗೆಯಲ್ಲಿದ್ದ ಮೇಕೆಗಳ ಅನುಮಾಸ್ಪದ ಸಾವಿನಿಂದ ಸುಮಾರು 2 ಲಕ್ಷಕ್ಕೂ ಅಧಿಕ ನಷ್ಟ ಹೊಂದಿದ್ದು, ನೆರವಿಗಾಗಿ ತಾಲೂಕು ಅಡಳಿತ ಮೊರೆಹೋಗಿದ್ದಾರೆ. ಮೇಕೆಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಜನಪ್ರತಿನಿಧಿಗಳ ಸಹಾಯಕ್ಕೆ ಎದುರು ನೋಡುವಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss