Wednesday, June 29, 2022

Latest Posts

ಕಲಬುರಗಿಯಲ್ಲಿ ಅಕ್ರಮ ಕಸಾಯಿಖಾನೆಗಳಿಗೆ ಕಡಿವಾಣ ಹಾಕಿ: ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಪಶು ಸಂಗೋಪನಾ ಸಚಿವರು

ಹೊಸ ದಿಗಂತ ವರದಿ, ಕಲಬುರಗಿ:

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಸಾಯಿಖಾನೆಗಳಿಗೆ ಕಡಿವಾಣ ಹಾಕುವಂತೆ ಇಲಾಖೆಯ ಅಧಿಕಾರಿಗಳಿಗೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಖಡಕ್ ಸೂಚನೆ ನೀಡಿದರು.
ಶುಕ್ರವಾರ ಇಲ್ಲಿನ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು ರಾಜ್ಯದಲ್ಲಿ
ಗೋವು ಸಂರಕ್ಷಣೆಗೆಂದೆ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದು, ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ
ಮೂಲಕ ಮೂಕ ಪ್ರಾಣಿಗಳನ್ನು ಸಂರಕ್ಷಿಸಬೇಕು ಎಂದು ಅಧಿಕಾರಿಗಳಿಗೆ ಕರೆ ನೀಡಿದರು.
ಪ್ರಾಣಿಗಳ ಸಂರಕ್ಷಣೆ ನಮ್ಮ ಸರ್ಕಾರದ ಸಂಕಲ್ಪವಾಗಿದೆ. ಇಲಾಖೆಯ ಅಧಿಕಾರಿಗಳು, ಪಶು ವೈದ್ಯರು 24 ಗಂಟೆ
ಕಾರ್ಯನಿರ್ವಹಿಸಬೇಕು. ಪ್ರಾಣಿ ಸಂರಕ್ಷಣೆ ಸಂತತಿ ಬೆಳವಣಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ವೈದ್ಯರು ಹಳ್ಳಿಗೆ
ಹೋಗಲ್ಲ, ಪ್ರಾಣಿಗಳಿಗೆ ಸಮರ್ಪಕ ಔಷದೋಪಚಾರ ಮಾಡುವುದಿಲ್ಲ ಎಂದ ಸಾಮಾನ್ಯ ದೂರು ಕೇಳಿ ಬರುತ್ತಿದ್ದು, ಇದನ್ನು
ನಾನು ಸಹಿಸುವುದಿಲ್ಲ. ದೂರು ಬಂದಲ್ಲಿ ಜಿಲ್ಲೆಯಿಂದ ವರ್ಗಾವಣೆ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಸಚಿವರು
ಎಚ್ಚರಿಕೆ ನೀಡಿದರು.
ಪ್ರಾಣಿಗಳ ಸಂರಕ್ಷಣೆಗಿದ್ದ ಹಳೇ 1964 ಕಾಯ್ದೆಯಲ್ಲಿ ಅಕ್ರಮವಾಗಿ ಪ್ರಾಣಿ ವಧೆ ಮಾಡಿದ ಆರೋಪ ಸಾಬೀತಾದಲ್ಲಿ
ಗರಿಷ್ಠ 1000 ರೂ. ವರೆಗೆ ದಂಡ ಮತ್ತು 6 ತಿಂಗಳ ಕಾರಾಗೃಹದ ಶಿಕ್ಷೆ ಇತು ್ತ. ಇದೀಗ ಗೋಮಾತೆಯ ಸಂರಕ್ಷಣೆಗೆ ಜಾರಿಗೆ
ತಂದಿರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ (ಗೋಹತ್ಯೆ ನಿಷೇಧ ಕಾಯ್ದೆ) ಮತ್ತು ಸಂರಕ್ಷಣಾ ಕಾಯ್ದೆ-2020
ಅಡಿಯಲ್ಲಿ ಗರಿಷ್ಠ 10 ಲಕ್ಷ ರೂ. ವರೆಗೆ ದಂಡ ಮತ್ತು 7 ವರ್ಷದ ವರೆಗೆ ಕಾರಾಗೃಹದ ಶಿಕ್ಷೆ ವಿಧಿಸಿದೆ ಎಂದರು.
ನಾನು ಸಚಿವನಾದ ನಂತರ 24 ಗಂಟೆ ಸೇವೆ ಒದಗಿಸುವ ಪಶು ಸಹಾಯವಾಣಿ, ಪಶು ಸಂಜೀವಿನಿ ಅಂಬುಲೆನ್ಸ್ ಸೇವೆ
ಜಾರಿಗೆ ತರಲಾಗಿದೆ. ಇದಲ್ಲದೆ ಪ್ರಾಣಿಗಳ ಹಿಂಸೆ ತಡೆಯಲು, ವೈಜ್ಞಾನಿಕ ಸಾಗಾಟ ಮತ್ತು ಸಂರಕ್ಷಣೆಗೆ ಸರ್ಕಾರಕ್ಕೆ ಆಗಾಗ ಸಲಹೆ
ನೀಡಲು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ. ಈ ಎಲ್ಲಾ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನ
ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪಶು ಆಸ್ಪತ್ರೆಗಳಿಗೆ ಬರುವ ಜಾನುವಾರುಗಳನ್ನು ಸೂಕ್ತ ರೀತಿಯಲ್ಲಿ ಚಿಕಿತ್ಸೆ ಮತು ್ತ ಔಷದೋಪಚಾರ ಮಾಡಬೇಕು.
ಆಯಾ ಕಾಲಕ್ಕೆ ಸೂಕ್ತ ಲಸಿಕೆ ಮತು ್ತ ರೋಗಗಳು ಕಂಡುಬಂದಲ್ಲಿ ಚುಚ್ಚುಮದ್ದು ನೀಡಬೇಕು. ಯಾವುದೇ ಕಾರಣಕ್ಕೂ ರೈತರಿಗೆ
ಹೊರಗಡೆಯಿಂದ ಔಷಧಿ ತರುವಂತೆ ಚೀಟಿ ನೀಡುವಂತಿಲ್ಲ ಎಂದು ಪಶು ವೈದ್ಯರಿಗೆ ಕಟ್ಟಪ್ಪಣೆ ಮಾಡಿದ ಸಚಿವರು ಕೃತಕ ಗರ್ಭದರಣೆ ಹೆಚ್ಚಿಸಬೇಕು.
ಸಹಾಯವಾಣಿಗೆ ಕರೆ ಬರುವ ಪ್ರತಿ ಕರೆಗೂ ಸ್ಪಂದಿಸಬೇಕು ಎಂದರು.
ಈ ಸಂದರ್ಭ  ಶಾಸಕ ಅವಿನಾಶ್ ಜಾಧವ, ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಸಿಇಒ ದಿಲಿಶ್ ಸಾಸಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss