Friday, August 19, 2022

Latest Posts

ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರು ಅಪಹರಿಸಿ ಮಾಂಸ ಮಾಡಿ ಹೊತ್ತೊಯ್ದ ದುರುಳರು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..

ಹೊಸ ದಿಗಂತ ವರದಿ, ಕುಶಾಲನಗರ:

ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತನ್ನು ಅಪಹರಿಸಿ ಮಾಂಸ ಮಾಡಿ ಹೊತ್ತೊಯ್ದಿರುವ ಘಟನೆ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡ ಅಳುವಾರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ದೊಡ್ಡ ಅಳುವಾರ ಗ್ರಾಮದ ಹೆಚ್.ಸಿ. ದಿನೇಶ್ ಎಂಬವರಿಗೆ ಸೇರಿದ ಎರಡು ಎತ್ತುಗಳು ಹಾಗೂ ನಾಲ್ಕು ಹಸುಗಳನ್ನು ಸೋಮವಾರ ರಾತ್ರಿ ಮನೆಯ ಹಿಂಭಾಗದ ಕೊಟ್ಟಿಯಲ್ಲಿ ಕಟ್ಟಿ ಹಾಕಲಾಗಿತ್ತೆನ್ನಲಾಗಿದ್ದು, ಈ ಪೈಕಿ ಸುಮಾರು 40 ಸಾವಿರ ರೂ. ಬೆಲೆ ಬಾಳುವ ಎತ್ತೊಂದನ್ನು ಅಪಹರಿಸಿದ ಜಾನುವಾರು ಕಳ್ಳರು, ಸಮೀಪದ ಸಿಲ್ವರ್ ಮರದ ತೋಪಿನ ಮಧ್ಯೆ ಅದನ್ನು ಮಾಂಸ ಮಾಡಿ ಹೊತ್ತೊಯ್ದಿದ್ದಾರೆ.
ಎತ್ತಿನ ತಲೆ, ಕಾಲು ಹಾಗೂ ಹೊಟ್ಟೆಯ ಭಾಗವನ್ನು ಅಲ್ಲಿಯೇ ಎಸೆಯಲಾಗಿದ್ದು, ಈ ಜಾಗಕ್ಕೆ ಬೈಕ್ ಮತ್ತು ಕಾರು ಬಂದಿರುವ ಗುರುತು ಪತ್ತೆಯಾಗಿದೆ. ದಿನೇಶ್ ಅವರು ಕುಶಾಲನಗರ ಗ್ರಾಮಾಂತರ ಠಾಣೆಗೆ ನೀಡಿದ ದೂರಿನ ಮೇರೆಗೆ ಠಾಣಾಧಿಕಾರಿ ಶಿವಶಂಕರ್ ಸ್ಧಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!