spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೇಶದಲ್ಲಿ ನಡೆದಿರುವ ಬಹುತೇಕ ಹಗರಣಗಳ ಪಿತಾಮಹರು ಕಾಂಗ್ರೆಸ್ಸಿಗರೆ: ಬಿಜೆಪಿ ಟೀಕೆ

- Advertisement -Nitte

ಹೊಸ ದಿಗಂತ ವರದಿ, ಮೈಸೂರು:

ದೇಶದಲ್ಲಿ ನಡೆದಿರುವ ಬಹುತೇಕ ಹಗರಣಗಳ ಪಿತಾಮಹರು ಕಾಂಗ್ರೆಸ್ಸಿಗರೇ ಎಂದು ಬಿಜೆಪಿ ಕುಟುಕಿದೆ.
ಕಾಂಗ್ರೆಸ್ ನಾಯಕರಾದ ವಿ.ಎಸ್.ಉಗ್ರಪ್ಪ ಹಾಗೂ ಸಲೀಂ ನಡುವೆ ನಡೆದಿರುವ ಸಂಭಾಷಣೆಯನ್ನು ಆಲಿಸಿದಾಗ ದಿಲ್ಲಿಯಿಂದ, ಗಲ್ಲಿಯವರೆಗೆ ಕಾಂಗ್ರೆಸ್‌ನ ಒಟ್ಟು ರಾಜಕಾರಣ ದೇಶದ ಸಂಪತ್ತನ್ನು ಲೂಟಿ ಮಾಡುವುದು. ಇದು ಆ ಪಕ್ಷದ ಕಾರ್ಯಪದ್ಧತಿಯೇ ಆಗಿರಬಹುದು. ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿಯಿoದ ಹಿಡಿದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತನಕ ಎಲ್ಲರೂ ಭ್ರಷ್ಟಾಚಾರದ ಆರೋಪದ ಹಿನ್ನಲೆಯಲ್ಲಿ ಜಾಮೀನಿನ ಮೇಲಿರುವವರು. ಬ್ರಹ್ಮಾಂಡ ಭ್ರಷ್ಟಾಚಾರದ ನೂರಾರು ಹಗರಣಗಳಲ್ಲಿ ಶಾಮೀಲು ಕೂಡ ಆಗಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಜೀಪ್ ಹಗರಣದಿಂದ ಹಿಡಿದು, ಬೋಫೋರ್ಸ್, 2ಜಿ, ಕಲ್ಲಿದ್ದಲು ಇನ್ನು ಮುಂತಾದ ಹಗರಣಗಳಿಂದಲೇ ಉಳಿದಿರುವ ಕಾಂಗ್ರೆಸ್ ಪಕ್ಷದ ನಾಯಕರನ್ನು ದೇಶದ ಜನರು ತಿರಸ್ಕರಿಸುತ್ತಿರುವುದು ಕಂಡು ಬಂದಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯನವರು ಈ ಸಲೀಂ-ಉಗ್ರಪ್ಪ ಸಂಭಾಷಣೆಯ ಬಗ್ಗೆ ಪ್ರತಿಕ್ರಿಯಿಸಬೇಕು. ಈ ಸಂಭಾಷಣೆಯ ಬಗ್ಗೆ ಮತ್ತಷ್ಟು ತನಿಖೆ ಆಗಿ ಕಾಂಗ್ರೆಸ್ಸಿಗರ ಪರಸ್ಪರ ಆಪಾಧನೆಗೆ ಸತ್ಯ ದರ್ಶನ ಮಾಡಿಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರ ವಕ್ತಾರ ಮೋಹನ್, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯರಾಮ್, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಜೋಗಿ ಮಂಜು ಮತ್ತಿತರರು ಉಪಸ್ಥಿತರಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss