ಜಗತ್ತಿನ ಕಣ್ಣಲ್ಲಿ ಬೈಜೂಸ್ ‘ಯಶಸ್ವಿ’ ಯೂನಿಕಾರ್ನ್, ಈ ಸಾಲದಾಟದಲ್ಲಿದೆ ನೋಡಿ ಅದರ ಅಸಲಿ ಹೂರಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಆನ್‌ಲೈನ್‌ ಕಲಿಕೆಗೆ ಹೊಸ ಆಯಾಮ ನೀಡಿದ ಖ್ಯಾತಿಗೆ ಪಾತ್ರವಾಗಿರೋ ಬೈಜೂಸ್‌ ಎಡ್‌ಟೆಕ್‌ ಕಂಪನಿ ಸಾಲದಲ್ಲಿ ಮುಳುಗಿದ್ದು ಸಾಲ ಮರುಪಾವತಿ ಮಾಡಲು ಸಾಲದಾತರಿಂದ ಹೆಚ್ಚಿನ ಸಮಯ ಕೇಳಿದೆ ಎಂದು ಬ್ಲೂಮ್‌ ವರದಿಯೊಂದು ಬಹಿರಂಗ ಪಡಿಸಿದೆ.

ಬೈಜುಸ್ ನವೆಂಬರ್ 2022 ರಲ್ಲಿ 1.2 ಬಿಲಿಯನ್‌ ಡಾಲರುಗಳಷ್ಟು ಸಾಲವನ್ನು ಈ ಹಿಂದೆ ತೆಗೆದುಕೊಂಡಿತ್ತು. ಆದರೆ ಸಾಲ ಮರುಪಾವತಿ ನಿಯಮಗಳು ಉಲ್ಲಂಘನೆಯಾಗಿರುವುದರಿಂದ ಸುಮಾರು 1.2 ಬಿಲಿಯನ್‌ ಡಾಲರ್‌ ಗಳಷ್ಟು ಮೌಲ್ಯದ ಸಾಲವನ್ನು ವೇಗವಾಗಿ ಮರುಪಾವತಿ ಮಾಡುವಂತೆ ಸಾಲದಾತರು ಒತ್ತಾಯಿಸುತ್ತಿದ್ದಾರೆ. ಸಾಲ ಒಪ್ಪಂದದಂತೆ ನಿಗದಿತ ಗಡುವಿನಲ್ಲಿ ತನ್ನ ಹಣಕಾಸು ವಿವರಗಳನ್ನು ನೀಡಲು ಬೈಜೂಸ್‌ ವಿಫಲವಾಗಿದೆ. ಹೀಗಾಗಿ ಸಾಲದಾತರು ಸಾಲದ ಭಾಗವನ್ನು ವೇಗವಾಗಿ ಮರುಪಾವತಿಸಲು ಒತ್ತಾಯಿಸಿದ್ದಾರೆ.

ಸಾಲದಾತರು ಸಾಲದ ಒಂದು ಭಾಗವನ್ನು ಮರುಪಾವತಿಸಲು ಕೇಳುತ್ತಿದ್ದು ಬೈಜೂಸ್‌ ಕಂಪನಿಯು ತೀವ್ರ ನಷ್ಟದಲ್ಲಿರುವುದರಿಂದ ಸಾಲಮರುಪಾವತಿಯ ಕುರಿತು ಸಾಲದಾತರು ಕಳವಳ ವ್ಯಕ್ತ ಪಡಿಸಿದ್ದಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಬೈಜೂಸ್‌ ನಷ್ಟದ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. 2,428 ಕೋಟಿ ರೂ. ಆದಾಯವಿದ್ದರೆ 4,588 ಕೋಟಿ ರೂಪಾಯಿಗಳಷ್ಟು ನಷ್ಟವುಂಟಾಗಿದೆ. ಹೆಚ್ಚಿದ ನಷ್ಟವನ್ನು ಸರಿಪಡಿಸಲು ಇತ್ತೀಚೆಗಷ್ಟೇ ಬೈಜೂಸ್‌ ವೆಚ್ಚಕಡಿತ ಕ್ರಮ ಕೈಗೊಂಡಿದ್ದು 2,500 ಉದ್ಯೋಗಿಗಳನ್ನು ಹೊರಹಾಕಿದೆ. ಇವೆಲ್ಲದರ ನಡುವೆ ಬೈಜೂಸ್‌ ಸಾಲದ ಜಂಜಾಟದಲ್ಲಿ ಸಿಲುಕಿದ್ದು ಮರುಪಾವತಿ ನಿಯಮಗಳನ್ನು ಮರು ಪರಿಶೀಲಿಸಲು ಹೆಚ್ಚಿನ ಕಾಲಾವಕಾಶ ಕೇಳಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!