Sunday, August 14, 2022

Latest Posts

ಕುಸ್ತಿ ಆಟದಲ್ಲಿ ಸೋತು ಆತ್ಮಹತ್ಯೆಗೆ ಶರಣಾದ ಬಬಿತಾ ಫೋಗಟ್ ಸೋದರ ಸಂಬಂಧಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್: 

ಕ್ರೀಡಾ ಲೋಕದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕುಸ್ತಿ ಆಟದಲ್ಲಿ ಸೋತೆನೆಂಬ ನಿರಾಶೆಯಿಂದಾಗಿ ಬಬಿತಾ ಫೋಗಟ್
ಅವರ ಸೋದರ ಸಂಬಂಧಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹರಿಯಾಣದ ಬಲಾಲಿ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ.
ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 12 ರಿಂದ 14 ರವರೆಗೆ ರಾಜಸ್ಥಾನದ ಭಾರತ್ಪುರದಲ್ಲಿ ನಡೆದ ರಾಜ್ಯಮಟ್ಟದ ಉಪ ಜೂನಿಯರ್, ಕಿರಿಯ ಮಹಿಳೆಯರು ಮತ್ತು ಪುರುಷರ ಕುಸ್ತಿ ಪಂದ್ಯಾವಳಿಯಲ್ಲಿ ರಿತಿಕಾ ಭಾಗವಹಿಸಿದ್ದರು. ಮಾರ್ಚ್ 14 ರಂದು ಅಂತಿಮ ಪಂದ್ಯ ನಡೆದಿತ್ತು. ಇದರಲ್ಲಿ ರಿತಿಕಾ ಒಂದು ಪಾಯಿಂಟ್‌ನಿಂದ ಪಂದ್ಯವನ್ನು ಸೋತಿದ್ದರು.
ಈ ಸೋಲಿನ ನಂತರ ಅವರು ಆಘಾತಕ್ಕೊಳಗಾಗಿದ್ದರು. ಮಾರ್ಚ್ 15 ರಂದು ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss