Thursday, July 7, 2022

Latest Posts

ತೋಟದಲ್ಲಿ ಅಡಿಕೆ ಕಳ್ಳತನ: ಪೊಲೀಸರಿಂದ ಪರಿಶೀಲನೆ

ಹೊಸ ದಿಗಂತ ವರದಿ, ಅಂಕೋಲಾ:

ತಾಲೂಕಿನ ಕೊಡ್ಲಗದ್ದೆಯಲ್ಲಿ ತೋಟದಲ್ಲಿ ಕೊಯ್ದಿಟ್ಟ ಸುಮಾರು 35 ಸಾವಿರ ರೂ. ಮೌಲ್ಯದ ಅಡಿಕೆ ಕೊನೆಗಳನ್ನು ಕಳ್ಳತನ ಮಾಡಲಾಗಿದ್ದು ಈ ಕುರಿತಂತೆ ತೋಟದ ಮಾಲಿಕ ರಾಮಚಂದ್ರ ವಿಶ್ವೇಶ್ವರ ಹೆಗಡೆ ಎನ್ನುವವರು ದೂರು ನೀಡಿರುವ ಹಿನ್ನೆಲೆಯಲ್ಲಿ ಕಾರವಾರದಿಂದ ಶ್ವಾನದಳ ಹಾಗೂ ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಡ್ಲಗದ್ದೆಯ ತೋಟದಲ್ಲಿ ಸುಮಾರು 10 ಚೀಲ ಅಡಿಕೆ ಕಳ್ಳತನ ಆಗಿರುವ ಕುರಿತಂತೆ ದೂರು ದಾಖಲಿಸಲಾಗಿತ್ತು.
ಅಂಕೋಲಾ ಪಿ.ಎಸ್.ಐ. ಪ್ರೇಮನಗೌಡ ಪಾಟೀಲ್, ಮುಶಾಹಿದ್ ಅಹಮದ್, ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ, ಶ್ರೀಕಾಂತ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲಿ ಆರೋಪಿಗಳ ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss