ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸ ದಿಗಂತ ವರದಿ, ಕೃಷ್ಣರಾಜಪೇಟೆ:
ತಾಲೂಕಿನ ಬೂಕನಕೆರೆ ಹೋಬಳಿ ಮೋದೂರು ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದ ಯುವಕರಿಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿರುವ ಘಟನೆಯು ಮಧ್ಯಾಹ್ನ 1ಗಂಟೆ ಸಮಯದಲ್ಲಿ ನಡೆದಿದೆ.
ಮೋದೂರು ಗ್ರಾಮದ ದಲಿತ ಮುಖಂಡ ರಮೇಶ ಅವರ ಪುತ್ರ ರಾಜು(18) ಮತ್ತು ದಲಿತ ಕಾಲೋನಿಯ ರಮೇಶ ಅವರ ಪುತ್ರ ಪ್ರದೀಫ(22) ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ದೊಡ್ಡಕೆರೆಯಲ್ಲಿ ಈಜಲು ಹೋಗಿದ್ದವರು ಇಬ್ಬರೂ ಒಟ್ಟಿಗೆ ಜಲಸಮಾಧಿಯಾಗಿದ್ದಾರೆ.
ಪ್ರದೀಫ ಅವರ ಮನೆಯಲ್ಲಿ ಬಣ್ಣ ಬಳಿಸುವ ಕೆಲಸವು ನಡೆಯುತ್ತಿದ್ದು ಸ್ನೇಹಿತರಾದ ಪ್ರದೀಪ ಮತ್ತು ರಾಜು ಇಬ್ಬರೂ ಕೆರೆಯಲ್ಲಿ ಈಜಾಡಿ ಸ್ನಾನಮಾಡಿಕೊಂಡು ಕೈಕಾಲು ಮುಖತೊಳೆದು ಬರೋಣ ಕೆರೆಯು ಭರ್ತಿಯಾಗಿದೆ ಎಂದು ಇಬ್ಬರೂ ಮಾತನಾಡಿಕೊಂಡು ಕೆರೆಯ ಬಳಿ ಹೋದಾಗ ಗ್ರಾಮದ ಇನ್ನಷ್ಟು ಚಿಕ್ಕಹುಡುಗರು ಸೇರಿಕೊಂಡು ಈಜಾಡಲು ಆರಂಭಿಸಿದ್ದಾರೆ. ಪ್ರದೀಪಗಿಂತಲೂ ಚಿಕ್ಕವನಾಗಿರುವ ರಾಜುವಿಗೆ ಈಜು ಎಷ್ಟೇನೂ ಚೆನ್ನಾಗಿ ಬರುತ್ತಿರಲಿಲ್ಲವಾದ್ದರಿಂದ ಆತನಿಗೆ ಬೆಂಗಾವಲಾಗಿದ್ದ ಪ್ರದೀಪ ಈಜು ಬರದೇ ನೀರಿನಲ್ಲಿ ಮುಳುಗುತ್ತಿದ್ದ ರಾಜುವನ್ನು ರಕ್ಷಿಸಲು ಹೋಗಿ ಇಬ್ಬರೂ ನೀರಿನಲ್ಲಿ ಮುಳುಗಿದ್ದನ್ನು ಕಂಡು ಇತರೆ ಈಜುಗಾರ ಹುಡುಗರು ಪ್ರದೀಪ ಮತ್ತು ರಾಜು ಈಜಲು ಹೋಗಿ ಇಬ್ಬರೂ ಮುಳುಗಿಹೋದರು ಎಂದು ಸುದ್ದಿ ಮುಟ್ಟಿಸಿದಾಗ ಗ್ರಾಮದ ಹಿರಿಯರು ಆತಂಕದಿಂದ ಕೆರೆಯ ಬಳಿ ಬಂದಾಗ ಇಬ್ಬರೂ ಹುಡುಗರು ನೀರಿನಲ್ಲಿ ಮುಳುಗಿ ನೆಲವನ್ನು ಹಿಡಿದುಕೊಂಡಿದ್ದು ಇಬ್ಬರ ಸುಳಿವೂ ಪತ್ತೆಯಾಗದ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡ ನಾಗರಾಜು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ನೀರಿನಲ್ಲಿ ಮುಳುಗಿರುವ ಇಬ್ಬರು ಬಾಲಕರ ಮೃತ ದೇಹವನ್ನು ಪತ್ತೆಮಾಡಿಕೊಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಶಿವಣ್ಣ ಮತ್ತು ಸಿಬ್ಬಂಧಿಗಳು ಸತತವಾಗಿ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಪ್ರದೀಪ ಮತ್ತು ರಾಜು ಅವರ ಮೃತ ದೇಹಗಳನ್ನು ಶೋಧಿಸಿ ದಡಕ್ಕೆ ತಂದು ಪೋಷಕರಿಗೆ ಒಪ್ಪಿಸಿದ್ದಾರೆ.