Monday, August 15, 2022

Latest Posts

ಕಂಬಿಬಾಣೆಯಲ್ಲಿ ಶಾಲಾ ವಿದ್ಯಾರ್ಥಿಗಳಿದ್ದ ಬಸ್ ಅವಘಡ!

ಸುಂಟಿಕೊಪ್ಪ(ಕೊಡಗು):

ಶಾಲಾ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿದ್ದ ರಾಜ್ಯ ರಸ್ತೆ ಸಂಸ್ಥೆ ಬಸ್ ಅವಘಡಕ್ಕೀಡಾದ ಘಟನೆ ಇಲ್ಲಿಗೆ ಸಮೀಪದ ಕಂಬಿಬಾಣೆಯಲ್ಲಿ ನಡೆದಿದೆ.
ಗುಡ್ಡೆಹೊಸೂರು-ಕಬ್ಬಿನಗದ್ದೆ ನಡುವೆ ಕಾಂಕ್ರಿಟ್ ರಸ್ತೆ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಬಸ್ ಗಳು ಕೊಡಗರಹಳ್ಳಿ- ಕಂಬಿಬಾಣೆ ಮಾರ್ಗವಾಗಿ ಸಂಚರಿಸುತ್ತಿದ್ದು, ಶನಿವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಕಂಬಿಬಾಣೆ ರೋಶಿಣಿ ತೋಟದ ಬಳಿ ರಸ್ತೆ ಬದಿಗೆ ಮಗುಚಿದೆ.
ಈ ಅವಘಡದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಶಾಲಾ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಕಿಟಕಿ ಮೂಲಕ ಹೊರ ಬರುವಂತಾಯಿತು. ಅಲ್ಲದೆ ಬೇರೆ ವಾಹನಗಳ ಮೂಲಕ ತೆರಳಬೇಕಾಯಿತು.
ಕಂಬಿಬಾಣೆ ರಸ್ತೆ ಬಹಳ ಇಕ್ಕಟಾಗಿದ್ದು ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಪ್ರಮಾಣದ ಪೊದೆಗಳು ಬೆಳೆದಿದ್ದು, ರಸ್ತೆ ಬದಿಯ ಹೊಂಡಗಳು ಕಾಣದೆ ಬಸ್ ರಸ್ತೆ ಬದಿಗೆ ವಾಲಿದೆ.
ಗ್ರಾಮಸ್ಥರು ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ
ಈ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರಾದ ಮಂಜುನಾಥ ರೈ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss