ರಾಜ್ಯದ ಮೊದಲ ನಕ್ಸಲ್ ಎನ್‌ಕೌಂಟರ್ ನಡೆದ ನಾಡಲ್ಲೇ ಈಗ ಮತ್ತೆ ಘರ್ಜಿಸಿತು ಸರ್ಕಾರಿ ಗುಂಡು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಂದು 2003 ನ.17 ಅದು ಪಶ್ಚಿಮಘಟ್ಟದಲ್ಲಿ ನಕ್ಸಲ್ ಚಟುವಟಿಕೆ ಆರಂಭವಾದ ದಿನಗಳು…

ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ದವಾಗಿ ನಕ್ಸಲ್ ಎಂಬ ಚಳವಳಿಯೊಂದು ಹುಟ್ಟಿಕೊಂಡಿದೆ ಎನ್ನುವುದನ್ನು ತಿಳಿಯದಂತಹ ಮುಗ್ದ ಸಮಾಜ ಪಶ್ಚಿಮ ಘಟ್ಟದ ತಪ್ಪಲು ಕಾರ್ಕಳ ತಾಲೂಕಿನ ಈದು ಗ್ರಾಮದ ಆ ಭಾಗದಲ್ಲಿತ್ತು. ಅಂದು ಕೈಯಲ್ಲಿ ಬಂದೂಕು ಹಿಡಿದುಕೊಂಡು ಅರಣ್ಯದಿಂದ ಒಕ್ಕಲೆಬ್ಬಿಸುವಿಕೆಗೆ ವಿರೋಧ ವ್ಯಕ್ತಪಡಿಸುತ್ತಾ ಬಂದ ತಂಡ, ಅಲ್ಲಿನ ಅಮಾಯಕ ಜನತೆಯ ಬೆಂಬಲ ಪಡೆಯಲು ಇನ್ನಿಲ್ಲದಂತೆ ಪ್ರಯತ್ನಿಸಿತ್ತು.

ಒಂದೆಡೆ ಈ ಬೆಳವಣಿಗೆ ನಡೆಯುತ್ತಿದ್ದರೆ ಇನ್ನೊಂದೆಡೆ ಅಲರ್ಟ್ ಆದ ಆಡಳಿತ ಇವೆಲ್ಲವುಗಳ ಮಾಹಿತಿ ಸಂಗ್ರಹಿಸಿ ಕಾರ್ಕಳ ತಾಲೂಕಿನ ಬೊಲ್ಲೊಟ್ಟು ರಾಮಪ್ಪ ಪೂಜಾರಿ ಅವರ ಮನೆಯಲ್ಲಿ ರಾತ್ರಿ ತಂಗಿದ್ದ ಐವರು ಶಂಕಿತ ನಕ್ಸಲ್ ತಂಡದ ಮೇಲೆ ಗುಂಡಿನ ದಾಳಿ ನಡೆದಿತ್ತು. ಇಲ್ಲಿ ಹಾಜಿಮಾ ಮತ್ತು ಪಾರ್ವತಿ ಎಂಬ ಇಬ್ಬರು ಯುವತಿಯರು ಎನ್‌ಕೌಂಟರ್‌ನಿಂದ ಪ್ರಾಣ ಕಳೆದುಕೊಂಡಿದ್ದರೆ, ಓರ್ವಳ ಬಂಧನವಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದರು. ಈ ಪ್ರಕರಣದಿಂದಾಗಿ ಪಶ್ಚಿಮಘಟ್ಟದಲ್ಲಿ ನಕ್ಸಲರ ಹೆಜ್ಜೆ ಗುರುತು ದೃಢಪಟ್ಟಿತ್ತು. ರಾಜ್ಯದ ಮೊದಲ ನಕ್ಸಲ್ ಎನ್‌ಕೌಂಟರ್‌ನಿಂದಾಗಿ ಈದು ಗ್ರಾಮದ ಬೊಲ್ಲೊಟ್ಟು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!