ಹೊಸ ದಿಗಂತ ಆನ್ ಲೈನ್ ಡೆಸ್ಕ್
ರಾಜ್ಯದಲ್ಲಿ ಮಂಗಳವಾರ 818 ಮಂದಿಗೆ ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 21 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿಗಳು ತಿಳಿಸಿವೆ.
ಇಂದು 1414 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ರಾಜ್ಯದಲ್ಲಿಂದು ಒಟ್ಟು ಸಕ್ರಿಯ ಪ್ರಕರಣಗಳ
ಸಂಖ್ಯೆ 13741 ಇದೆ. ಕೋವಿಡ್ ಪಾಸಿಟಿವಿಟಿ ದರ 0.86% ಆಗಿವೆ.
ಬೆಂಗಳೂರಿನಲ್ಲಿ ಇಂದು ಹೊಸದಾಗಿ 359 ಜನರಿಗೆ ಸೋಂಕು ತಗುಲಿದ್ದು, 8 ಜನ ಸಾವನ್ನಪ್ಪಿದ್ದಾರೆ. 381 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 7288 ಸಕ್ರಿಯ ಪ್ರಕರಣಗಳಿವೆ.