Friday, August 19, 2022

Latest Posts

ವಿಶ್ವಸಂಸ್ಥೆಯಲ್ಲಿ ಪಾಕ್ ಗೆ ಕ್ಲಾಸ್: ಈ IFS ಅಧಿಕಾರಿಯ ವಾಗ್ಝರಿಗೆ ತಲೆದೂಗುತ್ತಿದ್ದಾರೆ ಭಾರತೀಯರು!

ಹೊಸದಿಗಂತ ಆನ್ ಲೈನ್ ಡೆಸ್ಕ್:

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ಗೆ ತಿರುಗೇಟು ನೀಡಿದ ಭಾರತದ ವಿದೇಶಾಂಗ ಇಲಾಖೆ ಅಧಿಕಾರಿ ಸ್ನೇಹಾ ದುಬೆ ಕುರಿತು ಇದೀಗ ದೇಶದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಾಕಿಸ್ತಾನಕ್ಕೆ ಕಟುವಾಗಿ ಉತ್ತರ ನೀಡಿ, ಭಾರತೀಯರ ಹೃದಯ ಗೆದ್ದಿರುವ ಇವರ ಬಗ್ಗೆ ಇದೀಗ ಹೆಚ್ಚಿನ ಚರ್ಚೆಯಾಗಲು ಶುರುವಾಗಿದೆ.
ಪಾಕಿಸ್ತಾನವನ್ನು ಭಯೋತ್ಪಾದನೆಯ ಪೋಷಕ, ಇಡೀ ಜಗತ್ತಿಗೆ ತೊಂದರೆ ಕೊಡುತ್ತಿರುವ ದೇಶ ಎಂದು ನಿರರ್ಗಳವಾಗಿ ಭಾಷಣ ಮಾಡಿರುವ ಯುನ್​ನ ಭಾರತದ ಕಾರ್ಯದರ್ಶಿ ಸ್ನೇಹಾ ದುಬೆ ವಿಡಿಯೋ ವೈರಲ್​ ಆಗುತ್ತಿದ್ದಂತೆ ದೇಶದ ಜನರು ಸಿಕ್ಕಾಪಟೆ ಖುಷಿ ವ್ಯಕ್ತಪಡಿಸಿದ್ದಾರೆ. ಆಕೆಯ ಧೈರ್ಯಕ್ಕೆ ಶಹಬಾಸ್​ ಎಂದಿದ್ದಾರೆ.

ಬಳಿಕ ಸ್ನೇಹಾ ದುಬೆ ಬಗ್ಗೆ ಕುತೂಹಲವೂ ಕೂಡ ಹೆಚ್ಚಾಗಿದೆ. ಈ ಸ್ನೇಹಾ ಯಾರು? ಚಿಕ್ಕ ವಯಸ್ಸಿನಲ್ಲೇ ಇಷ್ಟು ಮಹತ್ವದ ಜವಾಬ್ದಾರಿ ಹೊರಲು ಕಾರಣ ಏನು? ಎಂಬ ಪ್ರಶ್ನೆಗಳು ಎದ್ದಿವೆ.

ಯಾರಿವರು ಸ್ನೇಹಾ ದುಬೆ?
ಸ್ನೇಹ ದುಬೆ 2012ರ ಐಎಫ್​​ಎಸ್​ ಬ್ಯಾಚ್​ನ ಅಧಿಕಾರಿಯಾಗಿದ್ದು, ಸಿವಿಲ್​ ಸರ್ವೀಸ್​ನ ಪರೀಕ್ಷೆಯನ್ನ ಮೊದಲ ಸುತ್ತಿನಲ್ಲೇ ಪಾಸ್​ ಮಾಡಿದ್ದರು. ಗೋವಾದಲ್ಲಿ ಶಾಲಾ ಶಿಕ್ಷಣ ಮುಗಿಸಿರುವ ಇವರು, ತದನಂತರ ಪುಣೆಯ ಫರ್ಗ್ಯುಸನ್​ ಕಾಲೇಜ್​ನಲ್ಲಿ ಕಾಲೇಜ್​ ಹಂತದ ಶಿಕ್ಷಣ ತದನಂತರ MPhil ಶಿಕ್ಷಣವನ್ನ ಜವಾಹರ್​ಲಾಲ್ ನೆಹರು ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ.

ಯುಪಿಎಸ್​ಸಿ ಪರೀಕ್ಷೆ ಪಾಸ್​ ಆಗಿ ಸರ್ಕಾರಿ ನೌಕರಿ ಪಡೆದ ಸ್ನೇಹಾ ದುಬೈ ತಂದೆ ವ್ಯಾಪಾರಿಯಾಗಿದ್ದು, 12 ವರ್ಷದ ಬಾಲಕಿಯಾಗಿದ್ದ ಸಂದರ್ಭದಲ್ಲೇ ಇಂಡಿಯನ್​​ ಫಾರಿನ್​​ ಸರ್ವೀಸ್​​​ ಸೇರುವ ಆಸೆ ಕಂಡಿದ್ದರು. ಅದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆಸಿ 2011ರಲ್ಲಿ ಮೊದಲ ಪ್ರಯತ್ನದಲ್ಲೇ ಪರೀಕ್ಷೆ ಪಾಸ್​ ಮಾಡಿದ್ದರು.ICS ಪರೀಕ್ಷೆ ಪಾಸ್​ ಆದ ಬಳಿಕ ಸ್ನೇಹ ವಿದೇಶಾಂಗ ವ್ಯವಹಾರಗಳ ಇಲಾಖೆ ಸೇರಿಕೊಂಡು ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಇದಾದ ಬಳಿಕ ಮ್ಯಾಡ್ರಿಡ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕಳುಹಿಸಲಾಗಿತ್ತು. ಇದೀಗ ವಿಶ್ವಸಂಸ್ಥೆಯಲ್ಲಿ ಅವರು ಭಾರತದ ಕಾರ್ಯದರ್ಶಿಯಾಗಿದ್ದಾರೆ.

ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪಾಕ್​​, ಕಣಿವೆ ನಾಡಿಗೆ ನೀಡಿದ್ದ ವಿಶೇಷ ಸ್ಥಾನಮಾನದ ಬಗ್ಗೆ ಮಾತನಾಡಿದರು. ಈ ವೇಳೆ, ತಿರುಗೇಟು ನೀಡಿರುವ ಸ್ನೇಹ ದುಬೆ , ವಾಸ್ತವದಲ್ಲಿ ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿರುವ ಪಾಕಿಸ್ತಾನ, ತನ್ನನ್ನು ತಾನು ಬೆಂಕಿ ಶಮನ ಮಾಡಿಕೊಳ್ಳುವವನಂತೆ ಜಗತ್ತಿನೆದುರು ಸೋಗು ಹಾಕಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದಿದ್ದ ಸ್ನೇಹಾ, ಈಗ ಪಾಕಿಸ್ತಾನ ಕಾನೂನು ಬಾಹಿರವಾಗಿ ವಶಪಡಿಸಿಕೊಂಡಿರುವ ಕಾಶ್ಮೀರದ ಭಾಗಗಳನ್ನು ಬಿಟ್ಟು ಹೊರಡಬೇಕು ಎಂದು ಹೇಳಿದ್ದರು.

ಸೋಷಿಯಲ್ ಮೀಡಿಯಾಗಳಲ್ಲಿ ಶ್ಲಾಘನೆ
ಸ್ನೇಹ ದುಬೆ ಭಾಷಣಕ್ಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನೇಕರು ಇವರ ಭಾಷಣಕ್ಕೆ ಫಿದಾ ಆಗಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!