Tuesday, June 28, 2022

Latest Posts

ಐಗೂರು ಗ್ರಾಮದಲ್ಲಿ ಒಂಟಿ ಸಲಗ ದಾಳಿ: ಕೃಷಿ ನಾಶ

ಹೊಸ ದಿಗಂತ ವರದಿ, ಸುಂಟಿಕೊಪ್ಪ:

ಕಾಡಿನಿಂದ ಆಹಾರ ಅರಸಿ ಬಂದ ಒಂಟಿ ಸಲಗವೊಂದು ಐಗೂರು ಗ್ರಾಮದಲ್ಲಿ ರಾತ್ರಿ ವೇಳೆ ತೋಟಕ್ಕೆ ಲಗ್ಗೆಯಿಟ್ಟು ಬಾಳೆಗಿಡ,
ತೆಂಗಿನ ಸಸಿ, ಮರಗೆಣಸನ್ನು ತಿಂದು ನಾಶಪಡಿಸಿದೆ.
ಬುಧವಾರ ರಾತ್ರಿ ಆಹಾರ ಅರಸಿಕೊಂಡು ಬಂದ ಕಾಡಾನೆ ಐಗೂರು ಗ್ರಾಮದ ಪಿ.ಕೆ.ಸೋಮಯ್ಯ, ಎಂ.ಸಿ.ಸಂಜಯ್, ಅಪ್ಪಣಿ, ಹರಪಳ್ಳಿತೋಟ, ಜಿ.ಕೆ.ಬಾಲಕೃಷ್ಣ ಎಂಬವರ ಜಾಗಕ್ಕೆ ನುಗ್ಗಿ ಬಾಳೆಗಿಡ, ತೆಂಗಿನ ಸಸಿ, ಮರಗೆಣಸುಗಳನ್ನು ಬೇಕಾಬಿಟ್ಟಿ ತಿಂದು ಕಾಫಿ ಗಿಡಗಳನ್ನು ಕಿತ್ತು ನಾಶಪಡಿಸಿದೆ.
ಐಗೂರು ಯಡವಾರೆ, ಕಾಜೂರು, ಯಡವನಾಡು ವಲಯದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ಸಂಜೆ ವೇಳೆ ತೋಟಕ್ಕೆ ಹಿಂಡಾಗಿ ಲಗ್ಗೆಯಿಡುತ್ತಿದ್ದು ಗ್ರಾಮಸ್ಥರು, ವಾಹನ ಚಾಲಕರು ಈ ವಿಭಾಗದಲ್ಲಿ ತಿರುಗಾಡಲು ಹೆದರುತ್ತಿದ್ದಾರೆ.
ಅರಣ್ಯ ಇಲಾಖೆಯವರು ಕಾಡಾನೆಯನ್ನು ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss