Tuesday, August 16, 2022

Latest Posts

ಮಹಿಳೆಯರು ಬೆತ್ತಲಾಗಿ ಓಡಾಡೋ ಈ ಕಾಡೊಳಗೆ ಕಾಲಿಡಲು ಪುರುಷರಿಗೆ ‘ನೋ ಎಂಟ್ರಿ’!!

  • ಕಾವ್ಯಾ ಜಕ್ಕೊಳ್ಳಿ

ಇಲ್ಲಿ ಪುರುಷರಿಗೆ ನೋ ಎಂಟ್ರಿ!
ಎಸ್, ನೀವು ಓದಿದ್ದು ಸರಿಯಾಗಿಯೇ ಇದೆ. ಮಹಿಳೆಯರಿಗೆ ‘ನೋ ಎಂಟ್ರಿ’ ಎಂಬಂಥಾ ಬೋರ್ಡ್ ನೀವು ಸಾಮಾನ್ಯವಾಗಿ ಹಲವೆಡೆಗಳಲ್ಲಿ ನೋಡಿರುತ್ತೀರಾ ಆದರೆ ಇಲ್ಲೊಂದು ಇಂಟ್ರೆಸ್ಟಿಂಗ್ ಜಾಗ ಇದೆ. ಈ ಜಾಗ ನೋಡಿರೋದು ಹಾಗಿರಲಿ, ನೀವು ಕೇಳಿರುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೆ ಇದು ಕಾಡು ಮತ್ತು ಇಲ್ಲಿ ಎಂಟ್ರಿ ಇರೋದು ಕೇವಲ ಮಹಿಳೆಯರಿಗೆ ಮಾತ್ರ!

ಹೌದು… ಇದೊಂದು ವಿಶೇಷ ಕಾಡು. ಇಲ್ಲಿ ಮಹಿಳೆಯರು ಮಾತ್ರ ವಾಸಿಸುತ್ತಾರೆ. ವಿಶೇಷವೆಂದರೆ ಈ ಮಹಿಳೆಯರು ಬಟ್ಟೆಯೇ ಧರಿಸುವುದಿಲ್ಲ. ಬೆತ್ತಲಾಗಿಯೇ ಓಡಾಟ, ಬೆತ್ತಲಾಗಿಯೇ ಬದುಕು. ಇಲ್ಲಿಗೆ ಪ್ರವಾಸದ ನೆಪದಲ್ಲಿಯೂ ಅಪ್ಪಿತಪ್ಪಿ ಕೂಡಾ ಪುರುಷರು ಬರುವಂತಿಲ್ಲ. ಬಂದರೆ ಮತ್ತೆ ಜೀವಂತವಾಗಿ ಪಾವಸ್ ಹೋಗುತ್ತಾರೆ ಅನ್ನುವ ಗ್ಯಾರೆಂಟಿಯೂ ಇಲ್ಲ. ಇದು ನಿಮ್ಮನ್ನು ಭಯಹುಟ್ಟಿಸೋಕೆ ಅಂತಾ ಹೇಳ್ತಿಲ್ಲಾರಿ. ಇದು ನಿಜಾವಾಗಿಯೂ ಹೌದು!

ಎಲ್ಲಿದೆ ಈ ಕಾಡು?
ಈ ವಿಶೇಷ ಕಾಡಿನ ಹೆಸರು ‘ಪುಪುವಾ’. ಇದು ಇರುವುದು ಇಂಡೋನೇಷ್ಯಾದಲ್ಲಿ. ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಇಂತಹದೊಂದು ರೂಲ್ಸ್ ಜಾರಿಗೆ ತಂದಿದೆ ಅಲ್ಲಿನ ಸರಕಾರ. ಈ ಕಾಡಿನಲ್ಲಿ ಮಹಿಳೆಯರು ತಮಗಿಷ್ಟ ಬಂದಂತೆ ಇರಬಹುದು. ಇಲ್ಲಿರುವವರಿಗೆ ಇಂಡೋನೇಷ್ಯಾ ಪೂರ್ತಿ ಸ್ವಾತಂತ್ರ್ಯ ಕೊಟ್ಟಿದೆ. ಹಾಗಾಗಿ ಪುಪುವಾ ಕಾಡಿನಲ್ಲಿ ವಾಸಿಸುವ ಮಹಿಳೆಯರು ಬಟ್ಟೆಯನ್ನೂ ಧರಿಸುವುದಿಲ್ಲ. ಬರುವವರಿಗೂ ಅಷ್ಟೇ.

ಇದು ಬೆತ್ತಲೆ ಕಾಡು, ಮಹಿಳೆಯರಿಗೆ ಮಾತ್ರ ಪ್ರವೇಶ.. ಅಪ್ಪಿತಪ್ಪಿ ಪುರುಷರು ಪ್ರವೇಶಿಸಿದರೆ ಕತೆ ಅಷ್ಟೇ!

ಕಾಡಿನ ಎಂಟ್ರಿಗೂ ಮೊದಲು ಬೆತ್ತಲಾಗಬೇಕು!
ಪುಪುವಾ ಕಾಡಿಗೆ “ಮ್ಯಾಂಗ್ರೋವ್ ಕಾಡು” ಎಂದು ಕೂಡ ಕರೆಯುತ್ತಾರೆ. ಇಲ್ಲಿನ ಜನ ಇದೊಂದು ಪವಿತ್ರ ಕಾಡು ಎಂದು ನಂಬಿದ್ದಾರೆ. ಈ ಕಾಡಿಗೆ ಸ್ಥಳೀಯ ಪುರುಷರಿಗೂ ಪ್ರವೇಶವಿಲ್ಲ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಪುರುಷರ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಇನ್ನೊಂದು ವಿಶೇಷ ಎಂದರೆ, ಇಲ್ಲಿಗೆ ಪ್ರವೇಶಿಸುವುದಕ್ಕೂ ಮೊದಲೇ ಮಹಿಳೆಯರು ಬಟ್ಟೆ ಬಿಚ್ಚಿ ಬೆತ್ತಲಾಗಬೇಕು, ಬಟ್ಟೆ ಧರಿಸಿ ಬರುವ ಮಹಿಳೆಯರಿಗೆ ಇಲ್ಲಿ ಪ್ರವೇಶ ನಿಷೇಧ. ಇದು ಇಂದು- ನಿನ್ನೆ ಹುಟ್ಟಿಕೊಂಡ ನಿಯಮವಲ್ಲ. ತಲೆತಲಾಂತರದಿಂದ ಬಂದಿರುವ ಸಂಪ್ರದಾಯ. ಇಂದಿಗೂ ಕೂಡ ಈ ಸಂಪ್ರದಾಯ ಉಳಿದಿರುವುದು ಮಾತ್ರ ವಿಶೇಷ.

ಪುರುಷ ಪ್ರವೇಶಿಸಿದರೆ ಘೋರ ಶಿಕ್ಷೆ!
‘ಕಾಡು ನೋಡಲೇ ಬೇಕು, ಅಂತಹದ್ದೇನಿದೆ ಅಲ್ಲಿ? ಮಹಿಳೆಯರಿಗೆ ಮಾತ್ರ ಏಕೆ ಅವಕಾಶ? ಪುರುಷರು ಪ್ರವೇಶಿಸಿದರೆ ಏನ್ ಮಾಡ್ತಾರೆ ನೋಡ್ತೀನಿ’ ಎಂಬ ಮೊಂಡು ಹಠಕ್ಕೆ ಬಿದ್ದು ನೀವೇನಾದರೂ ಈ ಕಾಡಿಗೆ ಎಂಟ್ರಿ ಕೊಟ್ಟು, ಅವರ ಕೈಗೆ ಸಿಕ್ಕಿ ಬಿದ್ದರೆ ಅಲ್ಲಿಗೆ ನಿಮ್ಮ ಕಥೆ ಮುಗಿಯಿತು. ಅವರು ನಿಮ್ಮನ್ನು ಅಲ್ಲಿನ ಬುಡಕಟ್ಟು ಜನಾಂಗದವರ ಕೈಗೆ ಒಪ್ಪಿಸುತ್ತಾರೆ. ಅಲ್ಲಿ ನ್ಯಾಯ ನಿರ್ಣಯವಾಗುತ್ತದೆ. ಕಠಿಣ ಶಿಕ್ಷೆ ವಿಧಿಸುತ್ತಾರೆ. ಶಿಕ್ಷೆಯ ಜೊತೆ 5 ಸಾವಿಕ್ಕಿಂತ ಹೆಚ್ಚಿನ ದಂಡ ನೀಡಬೇಕು. ದಂಡ ಎಂದ ತಕ್ಷಣ ದುಡ್ಡಿನ ರೂಪದಲ್ಲಿ ಅಂದುಕೊಳ್ಳಬೇಡಿ. ನಯವಾದ ಕಲ್ಲುಗಳ ರೂಪದಲ್ಲಿ ನೀಡಬೇಕಾಗುತ್ತದೆ.

ಆಂಡಿಯ್ರಾನಾ ಮೆರೌಡ್ಜಿ ಏನು ಹೇಳಿದ್ದಾರೆ?
ಆಂಡಿಯ್ರಾನಾ ಮೆರೌಡ್ಜಿ ಎಂಬಾಕೆ ಪುಪುವಾ ಕಾಡಿನ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿರುವಂತೆ ಇದೊಂದು ಪವಿತ್ರ ಕಾಡು. ಮೆರೌಡ್ಜಿ ಹುಟ್ಟುವುದಕ್ಕೂ ಮೊದಲೇ ಈ ಕಾಡಿಗೆ ಹೋಗುವ ಮಹಿಳೆಯರು ಬೆತ್ತಲಾಗಿ ಹೋಗಬೇಕೆಂಬ ಸಂಪ್ರದಾಯವಿದೆ. ಒಮ್ಮೆ ಬೆತ್ತಲಾಗಿ ಕಾಡಿಗೆ ಪ್ರವೇಶಿಸದ ಮೇಲೆ ಮುಗಿಯಿತು. ಮತ್ತೆ ಕಾಡಿನ ಒಳಗೂ ಒಟ್ಟೆ ಧರಿಸುವಂತಿಲ್ಲ.

ಇಲ್ಲಿನವರ ಉದ್ಯೋಗ ಏನು?
ಇಲ್ಲಿ ವಾಸಿಸುವ ಮಹಿಳೆಯರು ಸಮುದ್ರದಲ್ಲಿ ಸಿಗುವ ವಿಶೇಷ ರೀತಿಯ ಚಿಪ್ಪುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಾರೆ. ಈ ಚಿಪ್ಪುಗಳನ್ನು ಸಂಗ್ರಹಿಸಲು ಮಹಿಳೆಯರ ವಿಶೇಷ ತಂಡವೇ ಇರುತ್ತದೆ. ಎಲ್ಲ ಮಹಿಳೆಯರೂ ಸಮುದ್ರಕ್ಕೆ ಇಳಿಯುವುದಿಲ್ಲ. ಚಿಪ್ಪು ಸಂಗ್ರಹಿಸಲು ರಚಿಸಿಕೊಂಡ ತಂಡ ಮಾತ್ರ ಸಮುದ್ರಕ್ಕೆ ಇಳಿಯುತ್ತದೆ.

ಮೊದಲೆಲ್ಲ ಸಮುದ್ರಕ್ಕೆ ಇಳಿದ ಒಂದೆರಡು ಗಂಟೆಗಳಲ್ಲಿ ಚಿಪ್ಪುಗಳನ್ನು ಹುಡುಕಬಹುದಿತ್ತು. ಆದರೆ ಈಗ ನಗರದ ಜನರಿಂದಾದ ಅರಣ್ಯ ನಾಶ, ಪರಿಸರ ಮಾಲಿನ್ಯದಿಂದ ಇಡೀ ದಿನ ಚಿಪ್ಪಿಗಾಗಿ ಹುಡುಕಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಕೂಡ ಈ ಪುಪುವಾ ಕಾಡಿನ ವಿಚಿತ್ರ ಸಂಪ್ರದಾಯವನ್ನು ಇಂದಿಗೂ ಇಲ್ಲಿನ ಮಹಿಳೆಯರು ಜೀವಂತವಾಗಿಸಿದ್ದಾರೆ. ಇಂಟ್ರೆಸ್ಟಿಂಗ್ ಇದೆ ಅಲ್ವಾ?

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss