ಟರ್ಕಿಯಲ್ಲಿ ಕನ್ನಡಿಗರು ಸಿಲುಕಿರುವವರ ಬಗ್ಗೆ ಮಾಹಿತಿ ನೀಡಿ: ಸಿಎಂ ಬೊಮ್ಮಾಯಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟರ್ಕಿ ಭೂಕಂಪದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ರಕ್ಷಿಸಲು ವಿದೇಶಾಂಗ ಇಲಾಖೆ ಜತೆಗೆ ನಿರಂತರ ಸಂಪರ್ಕ ಮಾಡಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ವಿದೇಶಾಂಗ ಇಲಾಖೆ ವಿಶೇಷ ಹೆಲ್ಪ್‌ಲೈನ್‌ ಪ್ರಾರಂಭಿಸುತ್ತಿದ್ದು, ಆ ಮೂಲಕ ಕನ್ನಡಿಗರ ಮಾಹಿತಿ ಪಡೆದುಕೊಳ್ಳಲಾಗುವುದು. ಜತೆಗೆ ಟರ್ಕಿ ರಾಯಭಾರ ಕಚೇರಿ ಜತೆಗೂ ನಮ್ಮ ಅಧಿಕಾರಿಗಳು ಸಂಪರ್ಕ ಪಡೆದು ಅಲ್ಲಿ ಕನ್ನಡಿಗರು ಯಾರೆಲ್ಲ ಇದ್ದಾರೆಂದು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.

ಬೆಂಗಳೂರಿನಲ್ಲಿ ಸರ್ಕಾರ ಈ ಸಂಬಂಧ ಹೆಲ್ಪ್‌ಲೈನ್‌ ಪ್ರಾರಂಭಿಸಲಾಗುವುದು, ಜನರು ತಮ್ಮ ಬಂಧು-ಬಳಗದವರು ಯಾರಿದ್ದಾರೆ ಎಂಬ ಬಗ್ಗೆ ಮಾಹಿತಿ ಹಂಚಿಕೊಂಡರೆ ಅವರನ್ನೆಲ್ಲ ಸ್ವದೇಶಕ್ಕೆ ಕರೆತರಲು ಪ್ರಯತ್ನಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!