ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಾರ್ಷಿಕ ಕ್ರೀಡಾಕೂಟ-2022 ಉದ್ಘಾಟನೆ

ಹೊಸದಿಗಂತ ವರದಿ ಹುಬ್ಬಳ್ಳಿ:‌ 

ಪೊಲೀಸರು ವರ್ಷವಿಡೀ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಜೀವನ‌ ಮುಡಿಪಾಗಿಡುತ್ತಾರೆ. ಅವರಿಗೂ ಸಹ ನೆಮ್ಮದಿ‌ ಅವಶ್ಯಕತೆ ಇದೆ. ಅದು ಇಂತಹ ಕ್ರೀಡಾ ಚಟುವಟಿಕೆಯಿಂದ ದೊರೆಯುತ್ತದೆ ಎ‌ಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಕೆ.ಜಿ. ಶಾಂತ ಹೇಳಿದರು.

ಗೋಕುಲ ರಸ್ತೆಯ ಸಿಆರ್ ಮೈದಾನದಲ್ಲಿ ಶುಕ್ರವಾರ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಾರ್ಷಿಕ ಕ್ರೀಡಾಕೋಟಾ -2022 ಸಮಾರಂಭ ಉದ್ಘಾಟಿಸಿ ಮಾತನಾಡಿd ಅವರು, ಚಿಕ್ಕ ಮಕ್ಕಳಿಂದ ಹಿರಿಯರವರೆಗೂ ಕ್ರೀಡೆ ಎಂದರೆ ಏನೋ ಮಂದಹಾಸ. ಕ್ರೀಡೆಯಲ್ಲಿ ಬೇಧ ಭಾವ ಹಾಗೂ ವಯಸ್ಸಿನ ಮಿತಿಯಿರಲ್ಲ. ಎಲ್ಲರೂ ಸಹ ಆಸಕ್ತಿಯಿಂದ ಭಾಗವಹಿಸುತ್ತಾರೆ. ಕ್ರೀಡೆ ಎಂದರೆ ಶಿಸ್ತು. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದರು.

ಕ್ರೀಡಾ ಸ್ಪರ್ಧಿಗಳಲ್ಲಿ ನಾವೆಲ್ಲರೂ ಒಂದು ಎಂಬ ಭಾವನೆ ಇರುತ್ತದೆ. ಕ್ರೀಡೆಯಿಂದ ನಾಯಕತ್ವ ನಾಯಕತ್ವ ಗುಣ ಬರುತ್ತದೆ. ಇದರಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗ ಬಹುದು ಎಂದು ಹೇಳಿದರು. ಕ್ರೀಡೆ ಎಂದರೆ ಸ್ಪರ್ಧೆ ಅಲ್ಲ, ನಿಮ್ಮ ಪ್ರತಿಭೆ ಅನಾವರಣ ಮಾಡುವ ಉದ್ದೇಶವಾಗಿದೆ. ಕ್ರೀಡೆಯಲ್ಲಿ ಸಚಿತ್ತವಾಗಿ ಭಾಗವಹಿಸಬೇಕಾಗುತ್ತದೆ. ರಾಜ್ಯ ಮಟ್ಟ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯಬೇಕು ಎಂದು ಹಾರೈಸಿದರು.

ಪೊಲೀಸ್ ಆಯುಕ್ತ ಲಾಭೂರಾಮ, ಡಿ.ಸಿ.ಪಿ ಗೋಪಾಲ ಬ್ಯಾಕೋಡ, ಎಪಿಸಿ ವಿನೋದ ಮುಕ್ತೆದಾರ, ಆರ್.ಕೆ. ಪಾಟೀಲ, ಶ್ರೀನಿವಾಸ ಯಾದವ, ವಿಜಯಕುಮಾರ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!