Wednesday, November 30, 2022

Latest Posts

ಮಾತೃ ಶಕ್ತಿ ಸ್ವಾವಲಂಬಿ ಕೇಂದ್ರ ಉದ್ಘಾಟನೆ: ಮಹಿಳೆಯರಿಗೆ ವಿವಿಧ ಕೌಶಲ್ಯಗಳ ತರಬೇತಿ

ಹೊಸದಿಗಂತ ವರದಿ,ಕಲಬುರಗಿ:

ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ವಿವಿಧ ಕೌಶಲ್ಯಗಳ ತರಬೇತಿ ನೀಡಿ, ಸ್ವಾವಲಂಬಿಗಳನ್ನಾಗಿ ಮಾಡುವುದರ ಜೊತೆಗೆ ತಮ್ಮ ಕುಟುಂಬಕ್ಕೂ ಆರ್ಥಿಕವಾಗಿ ಸಹಾಯಮಾಡುವ ಸಾಮರ್ಥ್ಯ ಹೊಂದುವಂತಹ ಸ್ಥಿತಿಗೆ ಕೊಂಡೊಯ್ಯುವುದೆ ಈ ಹೊಲಿಗೆ ಕೇಂದ್ರದ ಮುಖ್ಯ ಉದ್ದೇಶವಾಗಿದೆ ಎಂದು ಕೇಂದ್ರದ ಕೋಶಾಧಿಕಾರಿ ಗಿರೀಶ್ ಹೆಬ್ಬಾರ ತಿಳಿಸಿದರು.

ಮಾತೃಶಕ್ತಿ ಸ್ವಾವಲಂಬಿ ಕೇಂದ್ರ ಕಲಬುರಗಿ ಹೊಲಿಗೆ ತರಬೇತಿ ಕೇಂದ್ರವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು,ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಜಾಜನ ಮುಗಳೀ ಗ್ರಾಮದಲ್ಲಿ ನೀರಾಜಿ ಬುವಾ ವಿಶ್ವಸ್ಥ ನಿಧಿ ಟ್ರಸ್ಟ್ ಅಡಿಯಲ್ಲಿ ಒಂದು ಚಟುವಟಿಕಾ ಕೇಂದ್ರವಾಗಿದ್ದು,19-04-1973ರಲ್ಲಿ ನೊಂದಣಿಯಾಗಿದೆ.ಇದನ್ನು ಪುನ: ನ.8-2021ರಂದು ಪುನರ್ ನವೀಕರಣ ಮಾಡಿ,ಅಧ್ಯಕ್ಷರನ್ನು ಸೇರಿ 11 ಜನ ಟ್ರಸ್ಟ್ ಸದಸ್ಯರನ್ನಾಗಿ ಮಾಡಲಾಗಿದೆ. ಸ್ವಾವಲಂಬಿ ಕೇಂದ್ರ ಸುಗಮವಾಗಿ ನಡೆಯಲು 7 ಸದಸ್ಯರ ಸಮಿತಿ ಕೂಡ ರಚನೆ ಮಾಡಲಾಗಿದೆ ಎಂದು ಹೇಳಿದರು.

ಸ್ಥಳೀಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹೋಲಿಗೆ ತರಭೇತಿ,ಕಂಪ್ಯೂಟರ್ ತರಭೇತಿ, ಮನೆಗಳಲ್ಲಿ ಆರೈಕೆ ನೀಡುವ ಕೌಶಲ್ಯ ಹೀಗೆ ವಿಷಯಗಳ ಆಯ್ದುಕೊಂಡು ಉಚಿತವಾಗಿ ಪರಿಣಿತರಿಂದ ತರಬೇತಿ ನೀಡಲಾಗುತ್ತಿದೆ. ಅ.27ರಂದು ಮೊದಲ ಕಾರ್ಯಕ್ರಮದ ಹೊಲಿಗೆ ತರಭೆತಿಯನ್ನು ಫಲಾನುಭವಿಗಳ ಮೊದಲ ತಮಢರ್ಖಖೇ ಮಹಾವೀರ ನಗರದಲ್ಲಿರುವ ಯಶ ಕೋಠಾರಿ ಕಲ್ಯಾಣ ಮಂಟಪದ ಪಕ್ಕ ಉದ್ಭವ ಎಂಬ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಿಸಲಾಗಿದೆ ಎಂದರು.

ಹೊಲಿಗೆ ತರಬೇತಿ ಪ್ರಾರಂಭವಾಗಿದ್ದು,ಇಚ್ಛೆಯುಳ್ಳವರು ನ.5 ಒಳಗಾಗಿ ಶ್ರೀಮತಿ ಸರಸ್ವತಿ ಹೆಬ್ಬಾರ ಮೊ-ನಂ-9480162305 ಸಂಪರ್ಕಿಸಲು ಕೋರಿದ್ದಾರೆ. ಇದಕ್ಕೂ ಮುನ್ನ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್,ನ ಕೋಶಾಧಿಕಾರಿ ಗಿರೀಶ ಹೆಬ್ಬಾರ ವಹಿಸಿದ್ದರು.ಸಾಗರ ಸತಾಳಕರ್, ಶಾಮಕುಮಾರ,ಡಾ.ಮೀತಾ ಅಂಗಡಿ, ಶ್ರೀಮತಿ ಸರಸ್ವತಿ ಹೆಬ್ಬಾರ,ಚಂದ್ರಕಾಂತ ಕಲಕೋರಿ ಸೇರಿದಂತೆ ಮಹಿಳೆಯರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!