Tuesday, June 28, 2022

Latest Posts

ಜಿತಕಾಮಾನಂದ ಸ್ವಾಮೀಜಿಯವರಿಂದ ಶ್ರೀ ಕೃಷ್ಣ ಜ್ಞಾನ ಕೇಂದ್ರ ಉದ್ಘಾಟನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ವರದಿ ಮಂಗಳೂರು:

ಬಂಟ್ವಾಳ ತಾಲೂಕಿನ ಮುಡಿಪು ಬೆಟ್ಟದಲ್ಲಿ ನಿರ್ಮಿಸಿರುವ ಶ್ರೀ ಕೃಷ್ಣ ಜ್ಞಾನ ಕೇಂದ್ರ ವನ್ನು ಸೋಮವಾರ (ಆ.30) ಉದ್ಘಾಟಿಸಿಲಾಯಿತು. ಮಂಗಳೂರು ಶ್ರೀ ರಾಮಕೃಷ್ಣ ಮಠದ ಶ್ರೀ ಜಿತಕಾಮಾನಂದಜಿ ಜ್ಞಾನ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ಅತ್ಯಂತ ಪ್ರಸಕ್ತವಾದ ಜಾಗದಲ್ಲಿ ಧ್ಯಾನ ಕೇಂದ್ರವನ್ನು ನಿರ್ಮಿಸಲಾಗಿದೆ. ಜನತೆ ಮನಸ್ಸಿನ ಏಕಾಗ್ರತೆಯ ಸಾಧನೆಗೆ ಜ್ಞಾನ ಕೇಂದ್ರದ ಪ್ರಯೋಜನವನ್ನು ಪಡೆಯ ಬಹುದಾಗಿದೆ. ಡಾ.ಮದನಮೋಹನ ನಾಯಕರು ಧ್ಯಾನ ಕೇಂದ್ರವನ್ನು ನಿರ್ಮಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಚಂಚಲ ಮನಸ್ಸಿನ ಏಕಾಗ್ರತೆಗೆ ಧ್ಯಾನವೊಂದೇ ದಾರಿಯಾಗಿದೆ. ಸಾಧು ಸಂತರು ಧ್ಯಾನ ಮೂಲಕವೇ ಸಾಧನೆ ಮಾಡಿದ್ದಾರೆ. ಧ್ಯಾನ ಅತ್ಯಂತ ಶ್ರೇಷ್ಠವಾದುದು ಎಂದು ಸ್ವಾಮೀಜಿ ನುಡಿದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಮುಖ್ಯ ಅತಿಥಿಯಾಗಿದ್ದರು. ಹರಿದ್ವಾರದ ಶ್ರೀ ಆನಂದ ಸ್ವಾಮೀಜಿ ಉಪಸ್ಥಿತರಿದ್ದರು.
ಶ್ರೀ ಕೃಷ್ಣ ಧ್ಯಾನ ಕೇಂದ್ರದ ಟ್ರಸ್ಟಿಗಳಾದ ಶಾಸಕ ಉಳಿಪ್ಪಾಡಿ ಗುತ್ತು ರಾಜೇಶ್ ನಾಯಕ್, ನಚ್ಚ ಶೈಲೇಂದ್ರ ಭರತ್ ನಾಯಕ್, ರವೀಂದ್ರನಾಥ್ ಆಳ್ವ, ಮೈಸೂರು ಇಲೆಕ್ಟ್ರಿಕಲ್ ಕಂಪೆನಿಯ ಅಧ್ಯಕ್ಷ ಬೋಳಿಯಾರ್ ಸಂತೋಷಕುಮಾರ್ ರೈ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ ಕಾರ್ಣಿಕ್ ಮೊದಲಾದವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು.
ಖ್ಯಾತ ವೈದ್ಯ ಡಾ.ಬಿ.ಎಂ.ಹೆಗ್ಡೆ, ನಿಟ್ಟೆ ವಿನಯ ಹೆಗ್ಡೆ, ವಾಸುದೇವ ಪೈ ಮತ್ತು ಶಂಕರ್ ರೈ ಶ್ರೀ ಕೃಷ್ಣ ಧ್ಯಾನ ಕೇಂದ್ರದ ಸಲಹೆಗಾರರಾಗಿದ್ದಾರೆ.
ಹದಿನಾಲ್ಕು ವರ್ಷಗಳ ಹಿಂದೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇನ್ಫೋಸಿಸ್, ನಿಟ್ಟೆ ವಿಶ್ವವಿದ್ಯಾಲಯ ಸಹಿತ ಹಲವರು ಯೋಜನೆ ಸಾಕಾರಗೊಳ್ಳುವಲ್ಲಿ ನೆರವು ನೀಡಿದ್ದಾರೆ. ಧ್ಯಾನ ಮಂದಿರವಲ್ಲದೆ ಇಲ್ಲಿ ಬಯಲು ರಂಗ ಮಂದಿರ, ಪ್ರಸಾದನ ಕೊಠಡಿ ಇದ್ದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸ ಬಹುದಾಗಿದೆ. ಅತ್ಯಪೂರ್ವವಾದ ವಸ್ತುಗಳಿರುವ ತುಳುನಾಡು ವಸ್ತು ಸಂಗ್ರಹಾಲಯ ಇದೆ ಎಂದು ಸ್ವಾಗತಿಸಿದ ಯೋಜನೆಯ ರೂವಾರಿಗಳಾದ ಡಾ.ಮದನಮೋಹನ ನಾಯಕ್ ತಿಳಿಸಿದರು.
83 ಸೆಂಟ್ಸು ವಿಸ್ತೀರ್ಣದಲ್ಲಿ ಧ್ಯಾನ ಕೇಂದ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss