ನಾಳೆ ಸಿಲಿಕಾನ್ ಸಿಟಿಯಲ್ಲಿ ನೂತನ ಮುಖ್ಯಮಂತ್ರಿ ಪದಗ್ರಹಣ: ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ಇಲ್ಲಿದೆ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಾಳೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಹೀಗಾಗಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಅಗಲಿದ್ದು, ಇದರ ನಿಯಂತ್ರಣಕ್ಕಾಗಿ, ವಾಹನ ಸವಾರರಿಗೆ ಕೆಲ ಸಲಹೆಗಳನ್ನು ಸಂಚಾರ ಪೊಲೀಸರಿಂದ ಬಿಡುಗಡೆ ಮಾಡಲಾಗಿದ್ದು, ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.ಹಾಗೂ ಪರ್ಯಾಯ ಮಾರ್ಗಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಸಮಯ : ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2.30 ಗಂಟೆಯವರೆಗೆ

1. ಕ್ಲೀನ್ ವೃತ್ತದ ಕಡೆಯಿಂದ ಸಿದ್ದಲಿಂಗಯ್ಯ ವೃತ್ತದ ಕಡೆಗೆ ವಾಹನ ಸಂಚಾರ ನಿರ್ಭಂದಿಸಿದ್ದು, ರಸ್ತೆ ಬಳಕೆದಾರರು ಕ್ಲೀನ್ಸ್ ವೃತ್ತದಲ್ಲಿ ಎಡ ಅಥವಾ ಬಲ ತಿರುವು ಪಡೆದು ಲ್ಯಾವಲ್ಲೆ ರಸ್ತೆ ಅಥವಾ ಕ್ವಿನ್ಸ್ ರಸ್ತೆಯ ಮೂಲಕ ಸಂಚರಿಸಬಹುದಾಗಿದೆ .

2. ಬಾಳೇಕುಂದ್ರಿ ವೃತ್ತದಿಂದ ಕ್ಲೀನ್ಸ್ ವೃತ್ತದ ಕಡೆಗೆ ತೆರಳುವ ವಾಹನಗಳನ್ನು ಪಟ್ಟಾ ಜಂಕ್ಷನ್ನಲ್ಲಿ ಪೊಲೀಸ್ ತಿಮ್ಮಯ್ಯ ವೃತ್ತದ ಕಡೆಗೆ ಡೈವರ್ಷನ್ ಮಾಡುವುದರಿಂದ ಬಿಎಂಟಿಸಿ ಹಾಗು ಇತರೆ ವಾಹನಗಳು ಪೊಲೀಸ್ ತಿಮ್ಮಯ್ಯ ವೃತ್ತದಲ್ಲಿ ಸಂಚರಿಸಬೇಕು.

3. ಸಿಟಿಓ ವೃತ್ತದಿಂದ ಕ್ಲೀನ್ಸ್ ವೃತ್ತದ ಕಡೆಗೆ ವಾಹನಗಳ ಸಂಚಾರವನ್ನು ನಿರ್ಭಂದಿಸಿದ್ದು, ರಸ್ತೆ ಬಳಕೆದಾರರು ಕಬ್ಬನ್ ರಸ್ತೆಯ ಮುಖೇನ-ಅನಿಲ್ ಕುಂಬ್ಳೆ ವೃತ್ತದ ಕಡೆಗೆ ಅಥವಾ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸಬೇಕು.

4. ಹಲಸೂರು ಗೇಟ್ ಕಡೆಯಿಂದ ಸಿದ್ದಲಿಂಗಯ್ಯ ಸರ್ಕಲ್ ಕಡೆಗೆ ಹೋಗುವ ವಾಹನಗಳನ್ನು ದೇವಾಂಗ ಜಂಕ್ಷನ್ ಹಾಗೂ ಮಿಷನ್ ರಸ್ತೆ ಕಡೆಗೆ ಮಾರ್ಗ ಬದಲಾವಣೆ ಮಾಡಲಾಗುವುದು.

5. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯ ವ್ಯಕ್ತಿಗಳ ವಾಹನಗಳನ್ನು ಸೆಂಟ್ ಜೋಸೆಫ್ ಕಾಲೇಜ್ ಮೈದಾನದಲ್ಲಿ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.

6. ಇತರೆ ವಾಹನಗಳನ್ನು ಬಿಬಿಎಂಪಿ ಮುಖ್ಯ ಕಚೇರಿ ಆವರಣ, ಬದಾಮಿ ಹೌಸ್, ಕೆ.ಜಿ. ರಸ್ತೆಯ ಎಡ ಬದಿಯಲ್ಲಿ ಹಾಗು ಯುನೈಟೆಡ್ ಮಿಷನ್ ಕಾಲೇಜ್ ಮೈದಾನದಲ್ಲಿ ನಿಲ್ಲಿಸಬಹುವುದು .

7. ಆರ್.ಆರ್.ಎಂ.ಆರ್ ರಸ್ತೆ ಹಾಗು ಕಸ್ತೂರ್ಬಾ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ನಿರ್ಬಂಧ

8. ಕಾರ್ಯಕ್ರಮಕ್ಕೆ ಆಗಮಿಸುವ ಆಹ್ವಾನಿತರು ತಮ್ಮ ತಮ್ಮ ವಾಹನಗಳಿಂದ ಇಳಿದು ಕೆ.ಬಿ. ರಸ್ತೆ ಪಾರ್ಕ್ ಮಾಡಲು ಕೋರಿದೆ.

9. ಸಾರ್ವಜನಿಕರು ಕೆಜಿ ರಸ್ತೆಯ ಎಸ್.ಬಿ.ಎಂ ಜಂಕ್ಷನ್ ಬಳಿ/ ರಿಚ್ ಮಂಡ್ ಸರ್ಕಲ್ ಬಳಿ/ಕ್ವಿನ್ಸ್ ಸರ್ಕಲ್ ಬಳಿ ವಾಹನದಿಂದ ಇಳಿದು ತಮ್ಮ ವಾಹನಗಳನ್ನು ಅರಮನೆ ಮೈದಾನದಲ್ಲಿ ನಿಲ್ಲಿಸುವಂತೆ ಸೂಚಿಸಲಾಗಿದೆ.

10. ರಸ್ತೆ ಬಳಕೆದಾರರು ಸಂಚಾರ ಪೊಲೀಸರು ನೀಡುವ ಸೂಚನೆಗಳನ್ನು ಪಾಲಿಸುವಂತೆ ಕೋರಲಾಗಿದೆ.

11.ನಗರದ ಯಾವುದಾದರೂ ರಸ್ತೆಯಲ್ಲಿ ವಾಹನ ಕೆಟ್ಟು ನಿಂತಲ್ಲಿ / ಅಪಘಾತ ಸಂಭವಿಸಿದಲ್ಲಿ ಗಮನಿಸಿದ ಕೂಡಲೇ ಸಂಚಾರ ನಿಯಂತ್ರಣ ಕೋಣೆ ದೂರವಾಣಿ ಸಂಖ್ಯೆ-080-22943131 ಅಥವಾ 080- 22943030 ಗೆ ಕರೆ ಮಾಡಿ ಮಾಹಿತಿ ನೀಡಲು ಕೋರಿದೆ.

12. ಮುಖ್ಯ ಕೆಲಸಗಳಿಗೆ ಹಾಗು ಪರೀಕ್ಷಾ ಕೇಂದ್ರಗಳಿಗೆ ತೆರಳಲು ಇಚ್ಛಿಸುವವರು ಸಾಕಷ್ಟು ಮುಂಚೆಯೇ ಪ್ರಯಾಣವನ್ನು ಪ್ರಾರಂಭಿಸಲು ಕೋರಿದೆ.

13. ದಿ: 20.05.2023 ರಂದು ಸಿಇಟಿ ಪರೀಕ್ಷೆಗೆ ಕಂಠೀರವ ಸ್ಟೇಡಿಯಂ ಸಮೀಪವಿರುವ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬೆಳಿಗ್ಗೆ 8.30ರ ಒಳಗಾಗಿ ತಲುಪುವಂತೆ ಸೂಚಿಸಲಾಗಿದೆ.

14. ಯಾವುದೇ ವಿದ್ಯಾರ್ಥಿಗೆ ಸಂಚಾರ ಸಂಬಂಧಿತ ಸಹಾಯ ಬೇಕಿದ್ದಲ್ಲಿ, ರಸ್ತೆಯಲ್ಲಿ ಕರ್ತವ್ಯನಿರತ ಸಂಚಾರ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.

15. ಮಧ್ಯಾಹ್ನದ ಸಿಇಟಿ ಪರೀಕ್ಷೆಗೆ ಸೆಂಟ್ ಜೋಸೆಫ್ ಪಿಯು ಇಂಡಿಯನ್ ಕಾಲೇಜು, ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ಸೆಂಟ್ ಮಾರ್ಕ್ಸ್ ರಸ್ತೆ, ವಿಠಲ್ ಮಲ್ಯ ರಸ್ತೆ ಮೂಲಕ ಬಂದು ಯೂಬಿ ಸಿಟಿಯ ಮುಂಭಾಗದ ಗೇಟ್ ನಿಂದ ಕಾಲೇಜಿಗೆ ಪ್ರವೇಶಿಸಬಹುದಾಗಿರುತ್ತದೆ.

16. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಸೆಂಟ್ ಜೋಸೆಫ್ ಪಿಯು ಕಾಲೇಜಿನ ಅಧಿಕಾರಿಗಳು ಸೆಂಟ್ ಜೋಸೆಫ್ ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಅಗತ್ಯ ಉಟೋಪಚಾರವನ್ನು ಏರ್ಪಡಿಸಿರುತ್ತಾರೆ.

17.ಸೆಂಟ್ ಜೋಸೆಫ್ ಕಾಲೇಜಿಗೆ ಪರೀಕ್ಷೆಗಾಗಿ ಬರುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರವನ್ನು ತಲುಪಲು ಸಂಚಾರ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಎಸಿಪಿ, ಸಂಚಾರ ಯೋಜನೆ ಮೊ.ನಂ.9480801809 ಅನ್ನು ಸಂಪರ್ಕಿಸಹುದಾಗಿರುತ್ತದೆ.

ಈ ಕುರಿತಂತೆ ಬೆಂಗಳೂರು ನಗರ ಸಂಚಾರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದಾರೆ.

ನಾಳೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಕ್ವೀನ್ಸ್ ವೃತ್ತದ ಕಡೆಯಿಂದ ಸಿದ್ಧಲಿಂಗಯ್ಯ ವೃತದ ಕಡೆಗೆ ಎಲ್ಲಾ ಮಾದರಿಯ ವಾಹನಗಳನ್ನು ನಿರ್ಬಂಧಿಸಿದ್ದು, ರಸ್ತೆ ಬಳಕೆದಾರರು ಕ್ವೀನ್ಸ್ ವೃತ್ತದಲ್ಲಿ ಎಡ ಅಥವಾ ಬಲ ತಿರುವು ಪಡೆದು, ಲ್ಯಾವೆಲ್ಲೆ ರಸ್ತೆ ಅಥವಾ ಕ್ವೀನ್ಸ್ ರಸ್ತೆಯ ಮೂಲಕ ಸಂಚರಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!