ಇಂಗ್ಲೆಂಡ್‌ನಲ್ಲಿ ಹೆಚ್ಚಿದೆ ಲಸ್ಸಾ ಜ್ವರದ ಭೀತಿ: ಇದರ ಲಕ್ಷಣಗಳೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಡೀ ವಿಶ್ವವೇ ಒಮಿಕ್ರಾನ್, ಕೊರೋನಾದಿಂದ ತೊಂದರೆಗೊಳಗಾಗಿದ್ದು, ಇಂಗ್ಲೆಂಡ್‌ನಲ್ಲಿ ಲಸ್ಸಾ ಜ್ವರದ ಭೀತಿ ಹೆಚ್ಚಾಗಿದೆ. ಲಸ್ಸಾ ಜ್ವರದಿಂದ ಬಳಲುತ್ತಿರುವ ಮೂವರಲ್ಲಿ ಒಬ್ಬರು ಮೃತಪಡುತ್ತಿದ್ದಾರೆ. ಈ ಪ್ರಕರಣಗಳು ಪಶ್ಚಿಮ ಆಫ್ರಿಕಾದ ದೇಶಗಳಿಗೂ ಹರಡುವ ಸಾಧ್ಯತೆ ಇದೆ. ಎಬೋಲಾ ಮಾದರಿಯ ವೈರಸ್‌ನಿಂದ ಲಸ್ಸಾ ಜ್ವರ ಉಂಟಾಗುತ್ತಿದ್ದು, ಇದು ಮಾರಣಾಂತಿಕವಾಗಿದೆ.

ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆಂಶನ್ ಆಂಡ್ ಕಂಟ್ರೋಲ್ ಅನ್ವಯ ಈ ಜ್ವರ ಬಂದರೆ ಲಕ್ಷಣಗಳು ಇರುವುದಿಲ್ಲ, ರೋಗನಿರ್ಣಯ ಕಷ್ಟ. ಕೆಲ ರೋಗಿಗಳಿಗೆ ಮಾತ್ರ ವಿಪರೀತ ಜ್ವರ ಗುಪ್ತಾಂಗದಲ್ಲಿ ರಕ್ತಸ್ರಾವ ಕಾಣಿಸುತ್ತದೆ ಎಂದು ಹೇಳಿದೆ.

ಈ ಜ್ವರ ಇಲಿಗಳಿಂದ ಹರಡುತ್ತದೆ. ಇಲಿಯ ಮೂತ್ರ ಅಥವಾ ಮಲದ ಸಂಪರ್ಕದಿಂದ ಜ್ವರ ಬರುತ್ತದೆ. ಜ್ವರ ಬಂದ ವ್ಯಕ್ತಿಯ ದೈಹಿಕ ದ್ರವ್ಯಗಳೊಂದಿಗೆ ಸಂಪರ್ಕಕ್ಕೆ ಬಂದರೆ ಅಥವಾ ಕಣ್ಣು, ಮೂಗಿ ಬಾಯಿಯ ಲೋಳೆಯ ಪೊರೆಗಳ ಮೂಲಕವೂ ಜ್ವರ ಹರಡುತ್ತದೆ. ಇದಕ್ಕೆ ಸೂಕ್ತ ಔಷಧ ಇಲ್ಲ. ರೋಗನಿರೋಧಕ ಶಕ್ತಿ ದೇಹದಲ್ಲಿ ಹೆಚ್ಚಿದ್ದರೆ ಲಸ್ಸಾ ಜ್ವರ ಬಾರದಂತೆ ತಡೆಯಬಹುದು. ಜ್ವರ, ಆಯಾಸ, ತಲೆನೋವು, ರಕ್ತಸ್ರಾವ, ಉಸಿರಾಟದ ತೊಂದರೆ, ವಾಂತಿ, ಮುಖ ಊತ, ಎದೆ ಬೆನ್ನು ಹೊಟ್ಟೆ ನೋವು, ಕಿವುಡುತನ ಈ ರೋಗದ ಲಕ್ಷಣಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!