Monday, July 4, 2022

Latest Posts

ಪಠ್ಯ ಪುಸ್ತಕಗಳಲ್ಲಿ ಬಾಬಾಬುಡನ್ ಗಿರಿ ಬದಲು ಇನಾಂ ದತ್ತಾತ್ರೇಯ ಪೀಠ ಎಂಬುದನ್ನು ಸೇರ್ಪಡೆಗೊಳಿಸಿ: ಸಿಎಂಗೆ ಪ್ರಾಣೇಶ್ ಒತ್ತಾಯ

ಹೊಸದಿಗಂತ ವರದಿ, ಚಿಕ್ಕಮಗಳೂರು:

ಪಠ್ಯ ಪುಸ್ತಕಗಳಲ್ಲಿ ಬಾಬಾಬುಡನ್ ಗಿರಿ ಎಂದು ನಮೂದಾಗಿರುವ ಕಡೆ ಇನಾಂ ದತ್ತಾತ್ರೇಯ ಪೀಠ ಎಂಬುದನ್ನು ಸೇರ್ಪಡೆಗೊಳಿಸಿ ತಿದ್ದುಪಡಿ ಮಾಡಬೇಕು ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಸಿಎಂಗೆ ಪತ್ರ ಬರೆದಿರುವ ಅವರು, ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳ ಪೈಕಿ ದತ್ತಪೀಠವು ವಿಶಿಷ್ಠ ಸ್ಥಾನ ಪಡೆದುಕೊಂಡಿದೆ. ಇದೊಂದು ಪವಿತ್ರ ಸ್ಥಳವೂ ಆಗಿದೆ. ಇಲ್ಲಿಗೆ ಸಹಸ್ರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮಹತ್ವವವನ್ನು ಪಡೆದಿದೆ. ೪, ೬ ಹಾಗೂ ೯ ನೇ ತರಗತಿ ಪಠ್ಯ ಪುಸ್ತಕಗಳಲ್ಲಿ ಈ ಪ್ರದೇಶವನ್ನು ಬಾಬಾಬುಡನ್ ಗಿರಿ ಎಂದು ನಮೂದಿಸಲಾಗಿದೆ. ಇದರಿಂದ ಮುಂದಿನ ಪೀಳಿಗೆಗೆ ಅಪೂರ್ಣ ಮಾಹಿತಿಯನ್ನು ಕೊಟ್ಟಂತಾಗುತ್ತದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಮುಂದಿನ ಜನಾಂಗ ಇನಾಂ ದತ್ತಾತ್ರೇಯ ಪೀಠ ಎನ್ನುವ ಮೂಲ ಹೆಸರನ್ನು ಹೊರತು ಪಡಿಸಿ ಬಾಬಾ ಬುಡನ್ ಗಿರಿ ಎಂದೇ ರೂಢಿ ಮಾಡಿಕೊಳ್ಳುವ ಸಾಧ್ಯತೆಗಳಿರುವ ಜೊತೆಗೆ ಈ ಪವಿತ್ರ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿಯೂ ಇಲ್ಲದಂತಾಗುತ್ತದೆ ಎಂದು ಹೇಳಿದ್ದಾರೆ.
ದತ್ತಪೀಠದ ಪಾವಿತ್ರ್ಯತೆ ಮತ್ತು ವೈಶಿಷ್ಠ್ಯತೆಯನ್ನು ಕಾಪಾಡಿಕೊಳ್ಳಲು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸಲು ಮತ್ತು ಪಶ್ಚಿಮಘಟ್ಟದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಸರ್ಕಾರಿ ದಾಖಲೆಗಳಲ್ಲಿ ನಮೂದಾಗಿರುವಂತೆ ಬಾಬಾಬುಡನ್ ಗಿರಿ ಹೆಸರಿನ ಜೊತೆಯಲ್ಲೇ ಇನಾಂ ದತ್ತಾತ್ರೇಯಪೀಠ ಎಂದು ಸೇರಿಸಿನ ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss