ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಮೋಸ್ಟ್ ವಾಂಟೆಡ್ ಸೈಬರ್ ವಂಚಕ ದಿಲೀಪ್ ರಾಜೇಗೌಡನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ಲೋಪ ಗುರುತು ಹಿಡಿದ ಆರೋಪಿ, ತೆರಿಗೆ ಕಟ್ಟಿದವರಿಗೆ ಸಲ್ಲಬೇಕಿದ್ದ ರೀ ಫಂಡ್ಸ್ನ್ನು ತನ್ನ ಖಾತೆಗೆ ವರ್ಗಾವಣೆ ಮಾಡುಕೊಳ್ಳುತ್ತಿದ್ದ.
ಇದೇ ರೀತಿ ಒಟ್ಟಾರೆ ಒಂದು ಕೋಟಿಗೂ ಹೆಚ್ಚು ಹಣವನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ, ದಿಲೀಪ್ ರೀಫಂಡ್ ಖಾತೆಗಳನ್ನು ಮಾತ್ರ ಹ್ಯಾಕ್ ಮಾಡುತ್ತಿದ್ದನು ಎಂಬುದು ತಿಳಿದು ಬಂದಿದೆ, ವಿಚಾರಣೆ ವೇಳೆ ಆತ ಇನ್ನಷ್ಟು ಸೈಬರ್ ವಂಚನೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.