ಎಪಿ, ತೆಲಂಗಾಣದ ಆರ್.ಎಸ್ ಬ್ರದರ್ಸ್, ಸೌತ್‌ ಇಂಡಿಯಾ ಶಾಪಿಂಗ್ ಮಾಲ್‌ಗಳ ಮೇಲೆ ಐಟಿ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೈದರಾಬಾದ್‌ನ ಹಲವೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಹೈದರಾಬಾದ್ ಮಾತ್ರವಲ್ಲದೆ ಎಪಿ ಮತ್ತು ತೆಲಂಗಾಣದ ಹಲವು ಶಾಪಿಂಗ್ ಮಾಲ್‌ಗಳು ಸೇರಿದಂತೆ ಒಟ್ಟು 20 ಸ್ಥಳಗಳಲ್ಲಿ ಈ ದಾಳಿಗಳನ್ನು ಏಕಕಾಲದಲ್ಲಿ ನಡೆಸಲಾಗುತ್ತಿದೆ. ಮಾಲ್‌ಗಳಲ್ಲಿನ ಉದ್ಯೋಗಿಗಳಿಂದ ಸೆಲ್‌ಫೋನ್‌ಗಳನ್ನು ವಶಪಡಿಸಿಕೊಂಡು ಶೋಧಕಾರ್ಯ ಮುಂದುವರೆಸಿದ್ದಾರೆ.

ಹೈದರಾಬಾದ್‌ನಲ್ಲಿರುವ ಆರ್‌ಎಸ್ ಬ್ರದರ್ಸ್, ಸೌತ್ ಇಂಡಿಯಾ ಶಾಪಿಂಗ್ ಮಾಲ್ ಮತ್ತು ಲಾಟ್ ಮೊಬೈಲ್ ಶಾಪ್‌ಗಳಲ್ಲಿ ಐಟಿ ದಾಳಿ ನಡೆಯುತ್ತಿದೆ. ಏಕಕಾಲಕ್ಕೆ ಎಪಿಯ ವಿಜಯವಾಡ, ಗುಂಟೂರು ಹಾಗೂ ಹೈದರಾಬಾದ್‌ನ ಹಲವು ಶಾಪಿಂಗ್ ಮಾಲ್‌ಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಇತ್ತೀಚೆಗೆ ಆರ್.ಎಸ್ ಸಹೋದರರ ಮಾಲೀಕತ್ವವು ಹಾನರ್ಸ್ ರಿಯಲ್ ಇನ್‌ಫ್ರಾ ಎಂಬ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಿದೆ. ವಾಸವಿ ಜತೆಗೆ ಹಾನರ್ಸ್ ಸಂಸ್ಥೆ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಕುಕಟ್ಪಲ್ಲಿಯಲ್ಲಿ ಗಲ್ಫ್ ಆಯಿಲ್ ಭೂ ವಿವಾದಗಳನ್ನು ಎದುರಿಸುತ್ತಿದೆ.

ಈ ಕ್ರಮದಲ್ಲಿ ಐಟಿ ಅಧಿಕಾರಿಗಳು ಹಾನರ್ಸ್, ಆರ್.ಎಸ್.ಬ್ರದರ್ಸ್ ಮೇಲೆ ಶೋಧ ನಡೆಸಿದ್ದಾರೆ. ಆರ್ ಎಸ್ ಬ್ರದರ್ಸ್ ವಾಸವಿ, ಸುಮಧುರ ಜೊತೆ ಸೇರಿ ವ್ಯಾಪಾರ ಮಾಡುತ್ತಿದ್ದಾರೆ.‌ ಹಾಗಾಗಿ ಐಟಿ ಅಧಿಕಾರಿಗಳ ಕಣ್ಣು ಶಾಪಿಂಗ್ ಮಾಲ್ ಗಳ ಮೇಲೆ ಬಿದ್ದಿದೆ. ಇದರೊಂದಿಗೆ ಎಪಿ ಮತ್ತು ತೆಲಂಗಾಣದ ಹಲವು ಶಾಪಿಂಗ್ ಮಾಲ್‌ಗಳಲ್ಲಿ ಏಕಕಾಲಕ್ಕೆ 20 ಪ್ರದೇಶಗಳಲ್ಲಿ ಶೋಧ ನಡೆಸಲಾಗುತ್ತಿದೆ. ಬ್ಯಾಂಕ್ ಖಾತೆಗಳ ವಹಿವಾಟು, ಹಾರ್ಡ್ ಡಿಸ್ಕ್ ಗಳನ್ನು ಪರಿಶೀಲಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!