Tuesday, July 5, 2022

Latest Posts

ಆದಾಯ ತೆರಿಗೆ ಪೋರ್ಟಲ್ ತಾಂತ್ರಿಕ ದೋಷ: ಆಗಸ್ಟ್ 15ರವರೆಗೆ ಗಡು ವಿಸ್ತರಣೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………….

ಹೊಸದಿಗಂತ ಆನ್‌ಲೈನ್ ಡೆಸ್ಕ್:

ತೆರಿಗೆದಾರರಿಗೆ ತೆರಿಗೆ ಪಾವತಿಯ ಕೊನೆ ದಿನಾಂಕದ ಬಗ್ಗೆ ಚಿಂತಿತರಾಗಿದ್ದರೆ ನಿಮಗೊಂದು ಖುಷಿಯ ವಿಷಯ ಸಿಕ್ಕಿದೆ. ಕೇಂದ್ರ ನೇರ ತೆರಿಗೆ ಮಂಡಳಿ, ಫಾರ್ಮ್ 15 ಸಿಎ/15 ಸಿಬಿ ಭರ್ತಿ ಮಾಡುವ ಗಡುವನ್ನು ವಿಸ್ತರಿಸಿದ್ದು, ಆಗಸ್ಟ್ 2021 15ರವರೆಗೆ ಫಾರ್ಮ್ ಭರ್ತಿ ಮಾಡಬಹುದು.
ಆದಾಯ ತೆರಿಗೆ ಇಲಾಖೆಗೆ ಹೊಸದಾಗಿ ಪ್ರಾರಂಭಿಸಲಾದ ವೆಬ್‌ಸೈಟ್ ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿರುವುದರಿಂದ ಅದರ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಜೂನ್ 7ರಂದು ಹೊಸ ಪೋರ್ಟಲ್ ಪ್ರಾರಂಭಿಸಿದೆ. ಇದರಿಂದ ತೆರಿಗೆದಾರರಿಗೆ ನಿರಂತರ ಸಮಸ್ಯೆಯಾಗುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡಿರುವ ತೆರಿಗೆ ಇಲಾಖೆ, ಗಡುವು ವಿಸ್ತರಿಸಿದೆ.
ಈ ಮೊದಲು ಜುಲೈ 15 ಕೊನೆ ದಿನಾಂಕವಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss