ಕೋವಿಡ್‌ ಪ್ರಕರಣಗಳಲ್ಲಿ ಗಣನೀಯ ಹೆಚ್ಚಳ 12 ಸಾವಿರಕ್ಕೂ ಅಧಿಕ ಕೇಸ್‌ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೋವಿಡ್‌ ಪ್ರಕರಣಗಳಲ್ಲಿ ದಿನೇ ದಿನೇ ಗಣನೀಯ ಏರಿಕೆಯಾಗುತ್ತಿದ್ದು ಎರಡನೇ ದಿನ 12 ಸಾವಿರದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 12,847 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿದೆ.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 63,063 ರಷ್ಟಿದ್ದು ದೈನಂದಿನ ಪಾಸಿಟಿವಿಟಿ ದರವು 2.47%ಕ್ಕೆ ಏರಿಕೆಯಾಗಿದೆ. ಒಟ್ಟೂ 7,985 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು ಚೇತರಿಕಾ ದರವು 98.64%ರಷ್ಟಿದೆ.

ದೇಶದಾದ್ಯಂತ 195.84 ಕೋಟಿ ಲಸಿಕೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!