ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೋವಿಡ್ ವಿಪರೀತ ಹೆಚ್ಚಳ: ಕಾಸರಗೋಡು ಜಿಲ್ಲೆಯ ಪ್ರಧಾನ ವ್ಯಾಪಾರ ಕೇಂದ್ರಗಳಿಗೆ ಪ್ರವೇಶ ನಿಯಂತ್ರಣ

ಹೊಸ ದಿಗಂತ ವರದಿ, ಕಾಸರಗೋಡು:

ಕೋವಿಡ್ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ಪ್ರಧಾನ ವ್ಯಾಪಾರ ಕೇಂದ್ರಗಳಲ್ಲಿ ಪ್ರವೇಶಾತಿಗಾಗಿ ಜಿಲ್ಲಾ ವಿಪತ್ತು ನಿವಾರಣಾ ಪ್ರಾಧಿಕಾರವು ಏರ್ಪಡಿಸಿರುವ ಕಟ್ಟುನಿಟ್ಟು ಕ್ರಮಗಳು ಏ.24 ರಂದು ಬೆಳಗ್ಗೆಯಿಂದಲೇ ಅನುಷ್ಠಾನಕ್ಕೆ ಬರಲಿವೆ.
ತಕ್ಷಣ ಜಾರಿಗೊಳಿಸಿದಲ್ಲಿ ಸಾರ್ವಜನಿಕರಿಗೆ ಸಂಭವಿಸಬಹುದಾದ ಸಂಕಷ್ಟಗಳನ್ನು ಮನಗಂಡು ಮುಂದಿನ ಶನಿವಾರದಿಂದ ಈ ಕಟ್ಟುನಿಟ್ಟು ಜಾರಿಗೊಳಿಸಲು ಶನಿವಾರ ತುರ್ತಾಗಿ ಸೇರಲಾದ ಜಿಲ್ಲಾ ವಿಪತ್ತು ನಿವಾರಣಾ ಪ್ರಾಧಿಕಾರದ ಸಭೆಯು ತೀರ್ಮಾನ ಕೈಗೊಂಡಿದೆ. ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
14 ದಿನಗಳ ಅವಧಿಯಲ್ಲಿ ಕೋವಿಡ್ ತಪಾಸಣೆ ನಡೆಸಿ ಪಡೆದ ನೆಗೆಟಿವ್ ಸರ್ಟಿಫಿಕೇಟ್ ಅಥವಾ ಎರಡು ಡೋಸ್ ವ್ಯಾಕ್ಸಿನೇಷನ್ ನಡೆಸಿರುವ ಸರ್ಟಿಫಿಕೇಟ್ ಇರುವವರು ಮಾತ್ರ ಜಿಲ್ಲೆಯ ಪ್ರಧಾನ ಕೇಂದ್ರಗಳಾದ ಕಾಸರಗೋಡು, ಉಪ್ಪಳ, ಕುಂಬಳೆ, ಕಾಞಂಗಾಡು, ನೀಲೇಶ್ವರ, ಚೆರುವತ್ತೂರು ಪೇಟೆಗಳನ್ನು ಪ್ರವೇಶಿಸಬಹುದಾಗಿದೆ ಎಂದು ಸಭೆಯು ತಿಳಿಸಿದೆ.
ಈ ಆದೇಶ ಅನುಷ್ಠಾನವಿರುವ ಪೇಟೆಗಳ ರಸ್ತೆಗಳ ಎರಡೂ ಬದಿಗಳಲ್ಲಿ ಪೊಲೀಸರು ತಪಾಸಣೆ ನಡೆಸುವರು. ಕೋವಿಡ್ ತಪಾಸಣೆ ಮತ್ತು ವ್ಯಾಕ್ಸಿನೇಷನ್ ಸೌಲಭ್ಯಗಳೂ ಈ ತಪಾಸಣೆ ಕೇಂದ್ರಗಳಲ್ಲಿ ಇರಲಿವೆ. ಈ ಕಟ್ಟುನಿಟ್ಟಿನ ಪ್ರದೇಶಗಳಲ್ಲಿ ತಲಾ ಒಬ್ಬ ಕಾರ್ಯಕಾರಿ ಮೆಜಿಸ್ಟ್ರೇಟ್
ಅವರನ್ನು ನೇಮಿಸಲು ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss