ಜಿಎಸ್ ಟಿ ಸಂಗ್ರಹದಲ್ಲಿ ಏರಿಕೆ: ಜೂನ್ ತಿಂಗಳಲ್ಲಿ 1.44 ಲಕ್ಷ ಕೋಟಿ ಸಂಗ್ರಹ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ದೇಶದಲ್ಲಿ ಜೂನ್ ನಲ್ಲಿ ಜಿಎಸ್ ಟಿ ಆದಾಯ ಸಂಗ್ರಹ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.56 ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಜೂನ್ ತಿಂಗಳಲ್ಲಿ 1.44 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ.
ನಿರ್ಮಲಾ ಸೀತಾರಾಮನ್ ಶುಕ್ರವಾರದಂದು ಜಿಎಸ್ ಟಿ ದಿನವನ್ನು ಉದ್ಘಾಟಿಸಿದ್ದು, ಈಗ 1.4 ಲಕ್ಷ ಕೋಟಿ ಜಿಎಸ್ ಟಿ ಸಂಗ್ರಹಕ್ಕೆ ಕನಿಷ್ಠ ಮಾನದಂಡವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಮೇ ತಿಂಗಳಲ್ಲಿ ಜಿಎಸ್ ಟಿ ಸಂಗ್ರಹ 1.41 ಲಕ್ಷ ಕೋಟಿ ರೂಪಾಯಿಗಳಷ್ಟಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!