UPI ಪಾವತಿಗಳಲ್ಲಿ ಹೆಚ್ಚಳ: ಡಿಸೆಂಬರ್‌ ತಿಂಗಳಲ್ಲಿ 12.82 ಲಕ್ಷ ಕೋಟಿ ರೂ. ದಾಖಲೆ ವಹಿವಾಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮೂಲಕ ಪಾವತಿಗಳು ಡಿಸೆಂಬರ್‌ ತಿಂಗಳಲ್ಲಿ ಏರಿಕೆಯಾಗಿದ್ದು ದಾಖಲೆಯ  12.82 ಲಕ್ಷ ಕೋಟಿ ರೂ. ವಹಿವಾಟು ನಡೆಸಿವೆ ಎಂದು ಸರ್ಕಾರಿ ಅಂಕಿ ಅಂಶಗಳು ಹೇಳಿವೆ.

UPI ಒಂದು ತ್ವರಿತ ನೈಜ-ಸಮಯದ ಪಾವತಿ ವ್ಯವಸ್ಥೆಯಾಗಿದ್ದು ಅದು ಅಂತರ್‌ ಬ್ಯಾಂಕ್ ಪೀರ್-ಟು-ಪೀರ್ (P2P) ವಹಿವಾಟುಗಳನ್ನು ಸುಗಮಗೊಳಿಸುತ್ತದೆ. ಅತ್ಯಂತ ಸುಲಬವಾಗಿ ಮೊಬೈಲ್‌ ಮೂಲಕ ವಹಿವಾಟು ನಡೆಸಲು ಯುಪಿಐ ಸಹಾಯಕವಾಗಿದೆ. ಜೊತೆಗೆ UPI ವಹಿವಾಟುಗಳಿಗೆ ಯಾವುದೇ ಶುಲ್ಕಗಳು ಅನ್ವಯಿಸುವುದಿಲ್ಲ.

”ದೇಶದಲ್ಲಿ ಡಿಜಿಟಲ್ ಪಾವತಿ ಕ್ರಾಂತಿಯನ್ನು ತರುವಲ್ಲಿ UPI ಪ್ರಮುಖ ಕೊಡುಗೆ ನೀಡಿದೆ. ಡಿಸೆಂಬರ್ 2022 ರಲ್ಲಿ, ಯುಪಿಐ 12.82 ಟ್ರಿಲಿಯನ್ ಮೌಲ್ಯದ 7.82 ಬಿಲಿಯನ್ ವಹಿವಾಟುಗಳ ದಾಖಲೆಯ ಮಟ್ಟ ತಲುಪಿದೆ” ಎಂದು ಹಣಕಾಸು ಸೇವೆಗಳ ಇಲಾಖೆ ಸೋಮವಾರ ಟ್ವೀಟ್‌ನಲ್ಲಿ ತಿಳಿಸಿದೆ.

ಈ ವರ್ಷದ ಅಕ್ಟೋಬರ್‌ನಲ್ಲಿ 12 ಲಕ್ಷ ಕೋಟಿ ರೂ. ಯುಪಿಐ ಪಾವತಿಗಳಾಗಿದ್ದವು ಮತ್ತು ನವೆಂಬರ್‌ನಲ್ಲಿ ಯುಪಿಐ ಮೂಲಕ ಸುಮಾರು 11.90 ಲಕ್ಷ ಕೋಟಿ ರೂ. ಮೌಲ್ಯದ 7.31 ಬಿಲಿಯನ್ ವಹಿವಾಟುಗಳು ನಡೆದಿದ್ದವು. ಈ ಪ್ರಮಾಣ ಡಿಸೆಂಬರ್‌ ತಿಂಗಳಲ್ಲಿ ಏರಿಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!