ಸೆಮಿಕಂಡಕ್ಟರ್‌ಗಳಿಗೆ ಹೆಚ್ಚಿದ ಬೇಡಿಕೆ: ಅತಿಹೆಚ್ಚು ಲಾಭಗಳಿಸಿದೆ ತೈವಾನ್‌ ಮೂಲದ ಕಂಪನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕವಾಗಿ ಸೆಮಿಕಂಡಕ್ಟರ್‌ ಗಳ ಕೊರತೆ ಉಂಟಾಗಿದ್ದು ಸೆಮಿಕಂಡಕ್ಟರ್‌ ಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿರುವುದರಿಂದ ತೈವಾನ್‌ನ ಚಿಪ್‌ ತಯಾರಿಕಾ ಕಂಪನಿ TSMC (ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ) ಯು ಎರಡನೇ ತ್ರೈಮಾಸಿಕದಲ್ಲಿ ಅತಿ ಹೆಚ್ಚು ಲಾಭಗಳಿಸಿದೆ. ತನ್ನ ನಿವ್ವಳ ಲಾಭದಲ್ಲಿ 76.4% ಏರಿಕೆ ಯನ್ನು ಕಂಪನಿ ದಾಖಲಿಸಿದೆ. ವಿಶ್ವದ ಅತಿದೊಡ್ಡ ಚಿಪ್‌ ತಯಾರಕ ಹಾಗೂ Apple Inc ಪೂರೈಕೆದಾರನಾಗಿರುವ ಕಂಪನಿಯು ಏಪ್ರಿಲ್‌ ನಿಂದ ಜೂನ್‌ ವರೆಗಿನ ಅವಧಿಯಲ್ಲಿ 237.0 ಶತಕೋಟಿ ತೈವಾನ್‌ ಡಾಲರ್‌ (7.94 ಶತಕೋಟಿ ಯುಎಸ್‌ ಡಾಲರ್‌) ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷ ಕಂಪನಿಯು 134.4 ಶತಕೋಟಿ ತೈವಾನ್‌ ಡಾಲರ್‌ ಲಾಭಗಳಿಸಿತ್ತು. ಪ್ರಸ್ತುತ ಲಾಭದ ಪ್ರಮಾಣದಲ್ಲಿ ಶೇ.76.4 ರಷ್ಟು ಏರಿಕೆಯಾಗಿದೆ.

ಕೋವಿಡ್‌ ಮಹಾಮಾರಿ ಸಂದರ್ಭದಲ್ಲಿ ಉಂಟಾದ ಚಿಪ್‌ ಕೊರತೆಯು ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು ಮತ್ತು ವಾಹನಗಳ ತಯಾರಕರಲ್ಲಿ ಉತ್ಪಾದನೆಯನ್ನು ಸಂಕೀರ್ಣಗೊಳಿಸಿದೆ ಅಥವಾ ಕಡಿತಗೊಳಿಸಿತ್ತು. ಚಿಪ್‌ ಕೊರತೆಯು ಬೇಡಿಕೆಯನ್ನು ಹೆಚ್ಚಿಸಿದ್ದು ಹೆಚ್ಚಿದ ಬೇಡಿಕೆಯು ಕಂಪನಿಯ ಲಾಭವನ್ನು ಉತ್ತೇಜಿಸಿದೆ.

ಪ್ರಸ್ತುತ 5G ನೆಟ್‌ವರ್ಕ್‌ಗಳು, ಕೃತಕ ಬುದ್ಧಿಮತ್ತೆ, ಹೆಚ್ಚಿನ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಚಿಪ್‌ಗಳ ಬೇಡಿಕೆಯಿಂದ, ಹಾಗೆಯೇ ಗ್ಯಾಜೆಟ್‌ಗಳು ಮತ್ತು ವಾಹನಗಳಲ್ಲಿ ಸೆಮಿಕಂಡಕ್ಟರ್‌ ಚಿಪ್‌ಗಳ ಹೆಚ್ಚಿನ ಬಳಕೆಯಿಂದಾಗಿ ಬೇಡಿಕೆಯು ಹೆಚ್ಚುತ್ತಲೇ ಇದ್ದು ಈ ವರ್ಷಪೂರ್ತಿ ಇದೇ ಟ್ರೆಂಡ್‌ ಮುಂದುವರಿಯಲಿದೆ ಇದು ಚಿಪ್‌ಮೇಕರ್‌ಗಳಿಗೆ ಪ್ರೀಮಿಯಂ ಬೆಲೆಗಳನ್ನು ವಿಧಿಸಲು ಅವಕಾಶ ಮಾಡಿಕೊಟ್ಟಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!