ನೆಟ್‌ ಫ್ಲಿಕ್ಸ್‌ಗೆ ಹೆಚ್ಚಿದ ನಷ್ಟ: ಮತ್ತೆ 300 ಉದ್ಯೋಗಿಗಳು ಕಿಕ್‌ ಔಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:
‌ಸ್ಟ್ರೀಮಿಂಗ್‌ ದಿಗ್ಗಜ ನೆಟ್‌ ಫ್ಲಿಕ್ಸ್‌ನ ಪಾವತಿ ಚಂದಾದಾರಿಕೆಯು (ಪೇಡ್ ಸಬ್ಸ್ಕ್ರಿಪ್ಷನ್) ದಿನೇ ದಿನೇ ಕಡಿಮೆಯಾಗುತ್ತಿದ್ದು ಇದರಿಂದಾಗಿ ಕಂಪನಿಯ ಆದಾಯ ಬೆಳವಣಿಗೆ ಕುಂಠಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡನೇ ಸುತ್ತಿನ ವಜಾಗೊಳಿಸುವಿಕೆಗೆ ಮುಂದಾಗಿದ್ದು 300 ಉದ್ಯೋಗಿಗಳನ್ನು ತೆಗೆದುಹಾಕಿದೆ.

ಈ ಹಿಂದೆಯೂ ಕೂಡ ಆದಾಯದಲ್ಲಿ ಕುಂಠಿತವಾಗಿದೆಯೆಂದು 150 ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು. ನಿರಂತರವಾಗಿ ಚಂದಾದಾರರ ಸಂಖ್ಯೆಯಲ್ಲಿ ಕುಸಿತ ಹಾಗೆಯೇ ಅದರ ಸ್ಟಾಕ್‌ ಗಳಲ್ಲಿನ ಕುಸಿತವುಂಟಾಗುತ್ತಿರುವುದು ಈ ಹಿಂದೆಯೇ ವರದಿ ಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಸ್ತುತ 300 ಉದ್ಯೋಗಿಗಳನ್ನು ಕೈ ಬಿಟ್ಟಿರುವುದಾಗಿ ನೆಟ್‌ ಫ್ಲಿಕ್ಸ್‌ ಹೇಳಿದೆ. ಪ್ರಸ್ತುತ 11,000 ಉದ್ಯೋಗಿಗಳನ್ನು ಹೊಂದಿರುವ ಸ್ಟರೀಮಿಂಗ್‌ ದೈತ್ಯ ನೆಟ್‌ಫ್ಲಿಕ್ಸ್‌ ತನ್ನ 2 ಪ್ರತಿಶತದಷ್ಟು ಉದ್ಯೋಗಿಗಳನ್ನು ಹೊರಹಾಕಿದೆ.

ಮೊದಲ ತ್ರೈಮಾಸಿಕದಲ್ಲಿ ಸುಮಾರು 2 ಲಕ್ಷ ಚಂದಾದಾರರನ್ನು ನೆಟ್‌ ಫ್ಲಿಕ್ಸ್‌ ಕಳೆದುಕೊಂಡಿತ್ತು. ಉಕ್ರೇನ್‌ ರಷ್ಯಾ ಯುದ್ಧ ಪರಿಣಾಮದಿಂದ ಮುಂದಿನ ತ್ರೈಮಾಸಿಕದಲ್ಲಿ ಕಂಪನಿಯು ಹೆಚ್ಚುವರಿ 2 ಮಿಲಿಯನ್ ಚಂದಾದಾರರನ್ನು ಕಳೆದುಕೊಳ್ಳಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲಯಲ್ಲಿ ತನ್ನ ನಷ್ಟವನ್ನು ಕಡಿಮೆ ಮಾಡಲು ಹಲವಾರು ಸುಧಾರಣೆಗಳನ್ನು ಕೈಗೆತ್ತಿಕೊಂಡಿದೆ. ಮೊದಲ ತ್ರೈಮಾಸಿಕದಲ್ಲಿ ಕಂಪನಿಯು $7.93 ಶತಕೋಟಿಡಾಲರ್‌ ಗಳಿಸಬಹುದು ಎಂದು ವಾಲ್‌ ಸ್ಟ್ರೀಟ್‌ ಅಂದಾಜಿಸಿತ್ತು ಆದರೆ ಮೊದಲ ತ್ರೈಮಾಸಿಕದಲ್ಲಿ 7.87 ಶತಕೋಟಿಡಾಲರ್‌ ಮಾತ್ರವೇ ಸಂಪಾದನೆಯಾಗಿತ್ತು.

ಆದ್ದರಿಂದ ನಷ್ಟವನ್ನು ತಡೆಯಲು ಕಂಪನಿ ಪ್ರಯತ್ನಿಸುತ್ತಿದ್ದು ಅಗ್ಗದ ಜಾಹೀರಾತು, ದರ ಇಳಿಕೆ, ಹಾಗೇ ಉದ್ಯೋಗಿಗಳ ವಜಾಗೊಳಿಸುವಿಕೆ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!