ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ: ಮನೆಯಿಂದಲೇ ಕೆಲಸ ಮಾಡಲು ಸರಕಾರ ಆದೇಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರ ರಾಜಧಾನಿ ದೆಹಲಿ ಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಸರ್ಕಾರವೇ ಶೇಕಡಾ 50 ರಷ್ಟು ಮಂದಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಿದೆ. ಇಷ್ಟೇ ಅಲ್ಲ ಇದೇ ನಿಯಮವನ್ನು ಖಾಸಗಿ ಕಂಪನಿಗಳು ಪಾಲಿಸುವಂತೆ ಪರಿಸರ ಖಾತೆ ಸಚಿವ ಗೋಪಾಲ್ ರೈ ಆದೇಶ ಹೊರಡಿಸಿದ್ದಾರೆ.

ದೆಹಲಿಯ ಪರಿಸ್ಥಿತಿ ಕುರಿತು ಹೈಕೋರ್ಟ್, ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ಹಲವು ಗಣ್ಯರು ಇದೀಗ ದೆಹಲಿಯಲ್ಲಿ ಓಡಾಡಬೇಡಿ. ಒಳಾಂಗಣದಲ್ಲೇ ಇರಿ ಎಂದು ಸಲಹೆ ನೀಡಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ದೆಹಲಿಯಲ್ಲಿಂದು ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಅಧಿಕಾರಿಗಳು, ಸಚಿವರ ಸಮಿತಿ ಜೊತೆ ಸಭೆ ಸೇರಿದ ಗೋಪಾಲ್ ರೈ ದೆಹಲಿ ಮಾಲಿನ್ಯ ನಿಯಂತ್ರಣ ಕುರಿತು ಚರ್ಚಿಸಿದ್ದಾರೆ.

ಈ ಸಭೆ ಬಳಿಕ ಗೋಪಾಲ್ ರೈ ಸುದ್ದಿಗೋಷ್ಠಿ ಮಾಹಿತಿ ನೀಡಿ, ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣ ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ತಕ್ಷಣಕ್ಕೆ ಜಾರಿಬರುವಂತೆ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಸಂಚಾರ ದಟ್ಟಣೆಯಿಂದ ಆಗುತ್ತಿರುವ ಮಾಲಿನ್ಯ ನಿಯಂತ್ರಿಸಲು ಟ್ರಾಫಿಕ್ ಡೈವರ್ಟ್ ಮಾಡಲು ಆದೇಶ

ಸರ್ಕಾರಿ ಉದ್ಯೋಗಿಗಳಿಗೆ ಶೇಕಡಾ 50 ರಷ್ಟು ಮಂದಿ ಮನೆಯಿಂದ ಕಡ್ಡಾಯ ಕೆಲಸ ಮಾಡಲು ಸೂಚಿಸಲಾಗಿದೆ. ಖಾಸಗಿ ಸಂಸ್ಥೆಗಳು ಇದೇ ನಿಯಮ ಪಾಲಿಸಲು ಸಲಹೆ ನೀಡಲಾಗಿದೆ.

ಖಾಸಗಿ ಸಂಸ್ಥೆಗಳಿಗೂ ವರ್ಕ್ ಫ್ರಮ್ ಹೋಮ್ ಆಯ್ಕೆ ನೀಡಲು ಆರ್ಡರ್

ಸಾರಿಗೆ ಇಲಾಖೆಯಿಂದ ತ್ವರಿತಗತಿಯಲ್ಲಿ 500 ಎಲೆಕ್ಟ್ರಿಕ್ ಬಸ್ ರಸ್ತೆಗಿಳಿಸಲು ಅನುಮೋದನೆ

ದೆಹಲಿ ಚಳಿಗೆ ಹೆಚ್ಚಿನ ಭಾಗಗಳಲ್ಲಿ ಕಲ್ಲಿದ್ದಲು, ಕಟ್ಟಿಗೆಗಳನ್ನು ಉರಿಸಲಾಗುತ್ತಿದೆ. ಇದನ್ನು ತಡೆಯಲು ಎಲೆಕ್ಟ್ರಿಕ್ ಹೀಟರ್ ಒದಿಗಸಲು ನಿರ್ಧರಿಸಲಾಗಿದೆ

ಕೈಗಾರಿಕೆಯಿಂದ ಮಾಲಿನ್ಯ ತಗ್ಗಿಸಲು 33 ತಂಡಗಳನ್ನು ರಚಿಸಲಾಗಿದೆ.

ಪ್ರಾಥಮಿಕ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಸೂಚಿಸಲಾಗಿದೆ. ಮಕ್ಕಳಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಳ್ಳುವ ಕಾರಣ ಆರೋಗ್ಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ದೀಪಾವಳಿ ಬಳಿಕ ದೆಹಲಿಯಲ್ಲಿ ವಾಯು ಗುಣಮಟ್ಟಸುಧಾರಣೆಯಾಗಿದ್ದು, ಕಳೆದ 5 ವರ್ಷದಲ್ಲೇ ಇದೆ ಮೊದಲ ಬಾರಿ ದಾಖಲಾಗಿದೆ ಎಂದು ಪರಿಸರ ಸಚಿವ ಗೋಪಾಲ್‌ ರೈ ಹೇಳಿದ್ದಾರೆ.

ಅಲ್ಲದೇ ಶೇ.30ರಷ್ಟುಕಡಿಮೆ ವಾಯುಮಾಲಿನ್ಯ ಉಂಟಾಗಿದ್ದು, ಕಳೆದ ವರ್ಷಕ್ಕಿಂತ ವಾಯುಮಾಲಿನ್ಯ ಮತ್ತಷ್ಟುಕಡಿಮೆಯಾಗಿದೆ. ಕಳೆದ ಬಾರಿ ವಾಯು ಗುಣಮಟ್ಟಸೂಚ್ಯಂಕ 462ರಷ್ಟಿತ್ತು. ಈ ವರ್ಷ 323ಕ್ಕೆ ಇಳಿಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!