ಲಾಕ್‌ಡೌನ್ ಬಳಿಕ ಹೆಚ್ಚುತ್ತಿದೆ ಬಾಲ್ಯ ವಿವಾಹ: ಕಳವಳ ತಂದಿದೆ ತನಿಖಾ ವರದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ಬಳಿಕ ಕೇರಳದಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಳವಾಗಿದ್ದು, ಈ ಬಗ್ಗೆ ಗುಪ್ತಚರ ಇಲಾಖೆ ವರದಿ ನೀಡಿದೆ.ವರದಿಗಳ ಪ್ರಕಾರ ಇಡುಕ್ಕಿಯ ಟೀ ಎಸ್ಟೇಟ್ ಪ್ರದೇಶಗಳಲ್ಲಿ ಬಾಲ್ಯ ವಿವಾಹಗಳು ನಡೆದಿದ್ದು, ಈ ಪೈಕಿ ನೆಡುಂಕಂಡಂ,  ಉಡುಂಬಂಚೋಳ ಪ್ರದೇಶಗಳಲ್ಲಿ ಏಳು ಮದುವೆಗಳು ನಡೆದಿವೆ. ನೆಡುಂಕಂಡಂನಿಂದ ಇಡುಕ್ಕಿಯ ಪೂಪಾರಾಗೆ 14 ರಿಂದ 15 ವರ್ಷದ ಹುಡುಗಿಯರನ್ನು ವಿವಾಹ ಮಾಡಿಕೊಡಲಾಗಿದೆ.
ಇವಿಷ್ಟೇ ಅಲ್ಲದೆ ಬಾಲಕಿಯರನ್ನು ಮದುವೆಗಾಗಿ ತಮಿಳುನಾಡಿಗೆ ಕರೆದೊಯ್ದು ಮದುವೆಯಾದ ಒಂದು ವಾರದ ಬಳಿಕ ಮತ್ತೆ ಕೇರಳಕ್ಕೆ ಮರಳುವ ಪ್ರಕರಣಗಳೂ ಪತ್ತೆಯಾಗಿವೆ.
ಪಾರಂತೋಡು, ಉಡುಂಬಂಚೋಳ ಮತ್ತು ಪೂಪಾರದಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂಬ ಬಗ್ಗೆ ರಾಜ್ಯ ವಿಶೇಷ ಶಾಖೆ ಮತ್ತು ಚೈಲ್ಡ್ ಲೈನ್ ವರದಿ ನೀಡಿತ್ತು.  ಈ ಬೆಳವಣಿಗೆ ಬಗ್ಗೆ  ವಿಸ್ತೃತ ತನಿಖೆ ನಡೆಸುವಂತೆ ಗುಪ್ತಚರ ಎಡಿಜಿಪಿ ನಿರ್ದೇಶನ ನೀಡಿದ್ದರು. ಅದರಂತೆ ಡಿವೈಎಸ್ಪಿ ಆರ್.  ಸಂತೋಷ್ ಕುಮಾರ್ ಸಲ್ಲಿಸಿರುವ ವರದಿಯಲ್ಲಿ ಈ ಗಂಭೀರ ಅಂಶಗಳು ಬೆಳಕಿಗೆ ಬಂದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!