ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೆಚ್ಚುತ್ತಿರುವ ಕೊರೋನಾ: ಕೇರಳದಲ್ಲಿ 18 ರೈಲುಗಳ ಸಂಚಾರ ರದ್ದು

 ಹೊಸದಿಗಂತ ವರದಿ, ಕಾಸರಗೋಡು:

ಕೋವಿಡ್ ನ ಎರಡನೇ ಅಲೆಯ ತೀವ್ರತೆಯಿಂದಾಗಿ ಪ್ರಯಾಣಿಕರ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಕೇರಳದಲ್ಲಿ ಸಾಗುವ 18 ರೈಲುಗಳನ್ನು ರದ್ದುಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರೈಲುಗಾಡಿಗಳನ್ನು ರದ್ದುಪಡಿಸುವ ಬಗ್ಗೆಯೂ ಕೇಂದ್ರ ರೈಲ್ವೇ ಇಲಾಖೆಯು ಚಿಂತನೆ ನಡೆಸಿರುವುದಾಗಿ ತಿಳಿದುಬಂದಿದೆ.
ಮಂಗಳೂರು ತನಕ ಸಂಚರಿಸುವ ಅಂತ್ಯೋದಯ ಎಕ್ಸ್ ಪ್ರೆಸ್ ನಲ್ಲಿ ಎರಡು ಬೋಗಿಗಳ ಪ್ರಯಾಣಿಕರು ಮಾತ್ರ ಇರುತ್ತಾರೆಂದು ರೈಲ್ವೇ ಇಲಾಖೆಯು ತಿಳಿಸಿದೆ. ಇದರಿಂದಾಗಿ ಬೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಕಳೆದ ವಾರದಿಂದ ಬೆಂಗಳೂರಿಗೆ ಸಾಗುವ ಕೊಚ್ಚುವೇಳಿ, ಎರ್ನಾಕುಳಂ – ಬಾನಸ್ ವಾಡಿ ಇತ್ಯಾದಿ ರೈಲುಗಳನ್ನು ರದ್ದು ಮಾಡಲಾಗಿದೆ. ಈ ವಾರದಿಂದ ದಕ್ಷಿಣ – ಪಶ್ಚಿಮ ರೈಲು, ಯಶವಂತಪುರ – ಕಣ್ಣೂರು ರೈಲುಗಳು ರದ್ದಾಗಿವೆ. ಇದರಿಂದಾಗಿ ಕಾಸರಗೋಡು ಜಿಲ್ಲೆಯೂ ಸೇರಿದಂತೆ ಮಲೆನಾಡು ಪ್ರದೇಶಗಳಿಂದ ಬೆಂಗಳೂರು ಭಾಗಗಳಿಗೆ ತೆರಳುವ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದರ ಬೆನ್ನಿಗೇ ದಕ್ಷಿಣ ರೈಲ್ವೇ 12 ರೈಲುಗಳನ್ನು ರದ್ದುಪಡಿಸಿದೆ. ರಾಜ್ಯದಲ್ಲಿ ಮಿನಿ ಲಾಕ್ ಡೌನ್ ಈಗಾಗಲೇ ಜಾರಿಯಲ್ಲಿ ಇರುವುದರಿಂದ ಪ್ರಯಾಣಿಕರ ಕೊರತೆಯ ಹಿನ್ನೆಲೆಯಲ್ಲಿ ರೈಲುಗಳ ಸೇವೆಗಳನ್ನು ರದ್ದುಪಡಿಸಲಾಗುತ್ತಿದೆ. ರಾತ್ರಿ ಹೊತ್ತಿನಲ್ಲಿ ರೈಲಿನಲ್ಲಿ ಬಂದಿಳಿಯುವ ಪ್ರಯಾಣಿಕರಿಗೆ ಬಳಿಕ ನಿಲ್ದಾಣದಿಂದ ಮನೆಗೆ ತೆರಳಲು ಇತರ ವಾಹನಗಳ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನಲಾಗಿದೆ.
ಕೇರಳದ ವಿವಿಧ ಜಿಲ್ಲೆಗಳ ಕಾರ್ಮಿಕರು ಮಾತ್ರ ಇದೀಗ ರೈಲುಗಳಲ್ಲಿ ಪ್ರಯಾಣ ಮಾಡುತ್ತಾರೆ. ಸರಕಾರಿ ಕಚೇರಿಗಳಲ್ಲಿನ ಹಾಜರಾತಿ ಸಂಖ್ಯೆ ಶೇಕಡಾ 25 ಎಂದು ಸರಕಾರವು ನಿಗದಿಪಡಿಸಿದ ನಂತರ ಸರಕಾರಿ ನೌಕರರು ಕೂಡ ರೈಲು ಪ್ರಯಾಣ ನಡೆಸುತ್ತಿಲ್ಲ ಎಂದು ತಿಳಿದು ಬಂದಿದೆ. ಕೋವಿಡ್ ನ ಎರಡನೇ ಅಲೆಯು ರಾಜ್ಯದ ಜನಜೀವನವನ್ನು ತತ್ತರಗೊಳಿಸಿದೆ. ಇದರೊಂದಿಗೆ ರೈಲುಗಳ ಸಂಚಾರವನ್ನು ಪ್ರಯಾಣಿಕರ ಕೊರತೆಯ ಹಿನ್ನೆಲೆಯಲ್ಲಿ ರದ್ದುಪಡಿಸುತ್ತಿರುವುದು ಜನರನ್ನು ಮತ್ತಷ್ಟು ಸಮಸ್ಯೆಗೀಡು ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss