ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೆಚ್ಚುತ್ತಿರುವ ಕೊರೋನಾ: ಕೇರಳದಲ್ಲಿ ಬಾರ್, ಸಿನೆಮಾ ಥಿಯೇಟರ್‌ಗಳು ರಾತ್ರಿ 9ರ ವರೆಗೆ ಮಾತ್ರ

ಹೊಸ ದಿಗಂತ ವರದಿ, ಕಾಸರಗೋಡು:

ಕೋವಿಡ್ ಹರಡುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಾರ್‌ಗಳು ಹಾಗೂ ಸಿನೆಮಾ ಥಿಯೇಟರ್‌ಗಳು ರಾತ್ರಿ 9 ಗಂಟೆಯ ವರೆಗೆ ಮಾತ್ರವೇ ಕಾರ್ಯಾಚರಿಸಲಿವೆ. ಕೇರಳ ಸರಕಾರದ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ತಿರುವನಂತಪುರದಲ್ಲಿ ನಿರ್ದೇಶನ ಹೊರಡಿಸಿದ್ದಾರೆ.
ಹೊಟೇಲ್ ಹಾಗೂ ಅಂಗಡಿಗಳಿಗೆ ಅನ್ವಯವಾಗುವ ಸಮಯ ವ್ಯವಸ್ಥೆಯು ಎಲ್ಲ ಸಂಸ್ಥೆಗಳಿಗೂ ಅನ್ವಯವಾಗಲಿದೆ. ಇದೇ ವೇಳೆ ಆಸ್ಪತ್ರೆಗಳ ಸಮೀಪ ಕಾರ್ಯಾಚರಿಸುವ ಔಷಧಿ ಅಂಗಡಿಗಳಂತಹ ಅತ್ಯಗತ್ಯ ಸಂಸ್ಥೆಗಳಿಗೆ ರಿಯಾಯಿತಿ ನೀಡಲಾಗಿದೆ.
ಕಂಟೈನ್‌ ಮೆಂಟ್ ವಲಯಗಳ ಸರಕಾರಿ ಕಚೇರಿಗಳ ನೌಕರರ ಸಂಖ್ಯೆ ಕಡಿಮೆ ಮಾಡುವ ವಿಷಯದಲ್ಲಿ ಜಿಲ್ಲಾಧಿಕಾರಿಗಳು ನಿರ್ಧಾರ ಕೈಗೊಳ್ಳುವರು. ಆದರೆ ಅನೇಕ ಮಂದಿ ನೌಕರರು ಹಾಗೂ ಅಧ್ಯಾಪಕರು ವ್ಯಾಕ್ಸಿನ್ ಸ್ವೀಕರಿಸಲು ಬಾಕಿಯಿರುವುದರಿಂದ ನೌಕರರ ಸಂಖ್ಯೆಯಲ್ಲಿ ಕಡಿತ ಮಾಡಬೇಕಾಗಿ ಬರಬಹುದೆಂದು ಅವರು ಅಭಿಪ್ರಾಯಪಟ್ಟರು. ಪ್ರಸ್ತುತ ನಡೆಯುತ್ತಿರುವ ಕೋವಿಡ್ ತಪಾಸಣೆಯಿಂದಾಗಿ ಎರಡು ವಾರದೊಳಗೆ ರೋಗಿಗಳ ಸಂಖ್ಯೆ ಕಡಿಮೆಯಾಗಲಿದೆ. ಆದ್ದರಿಂದ ಈಗ ಹೇರಿದ ನಿಯಂತ್ರಣ ಎರಡು ವಾರಗಳಿಗೆ ಮಾತ್ರವೆಂದೂ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss