Thursday, August 11, 2022

Latest Posts

ಹೆಚ್ಚುತ್ತಿರುವ ಕೊರೋನಾ ಸೋಂಕು: ಕಂಟೋನ್ಮೆಂಟ್ ಜೋನ್‌ಗೆ ಮುತ್ತತ್ತಿ ರಸ್ತೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಹಲಗೂರು :

ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆ ಮೇರೆಗೆ ಹಲಗೂರಿನಿಂದ ಮುತ್ತತ್ತಿಗೆ ಹೋಗುವ ರಸ್ತೆ ಮತ್ತು ಮಠದ ಬೀದಿಯನ್ನು ಕಂಟೋನ್ಮೆಂಟ್ ಜೋನ ಎಂದು ತಹಸೀಲ್ದಾರ್ ಅವರು ಆದೇಶ ಮಾಡಿರುವ ಮೇರೆಗೆ ಇಂದು ಈ 2 ಬೀದಿಗಳನ್ನು ಸಿಲ್ಡ್ ಡೌನ್ ಮಾಡಿರುವುದಾಗಿ ಗ್ರಾಮಲೆಕ್ಕಿಗರಾದ ಜಿ. ಎಸ್. ಶಿವಕುಮಾರ್ ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಚಿಕ್ಕಮಾದು ಮಾತನಾಡಿ ಮುಂಜಾಗ್ರತೆ ಕ್ರಮವಾಗಿ 2 ಸಾರಿ ಎಲ್ಲಾ ರಸ್ತೆಗಳಿಗೂ ಸ್ಯಾನಿಟ್ಯೇಜರ ಸಿಂಪಡಿಸಲಾಗಿದೆ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಆಶಾ ಕಾರ್ಯಕರ್ತರಿಗೆ ಪಂಚಾಯಿತಿ ವತಿಯಿಂದ ಸ್ಯಾನಿಟೈರ್ಜ. ಮಾಸ್ಕ್. ವಿತರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಲಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಿಕ್ಕಮಾದು .ಬಿಲ್ ಕಲೆಕ್ಟರ್ ಎನ್ .ಆನಂದ್ .ದಪೇದಾರ್ ಕೆ . ಜಿ ಮರಿಸ್ವಾಮಿ .ಮತ್ತು ಪಂಚಾಯಿತಿ ಸಿಬ್ಬಂದಿಗಳಾದ ಶಿವಣ್ಣ ಮಾಯಪ್ಪ ,ಮಹಾದೇವ, ಲಕ್ಷ್ಮಣ, ಸಿಬ್ಗತುಲ್ಲಾ ಮತ್ತು ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss