ಇತ್ತೀಚೆಗೆ ಮಹಿಳೆಯರಿಗೂ ಕೂಡ ಕಿಡ್ನಿಯಲ್ಲಿ ಕಲ್ಲು ಬೆಳೆಯುವ ಸಮಸ್ಯೆ ಹೆಚ್ಚುತ್ತಿದೆ. ಕಿಡ್ನಿಯಲ್ಲಿ ಸ್ಟೋನ್ ಬೆಳೆದರೆ ಅದರ ನೋವನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಮೂತ್ರ ಮಾಡಲು ಆಗದೆ ಯಮಯಾತನೆಯಂತಹ ನೋವು ಕಾಣಿಸಿಕೊಳ್ಳುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆ ಎದುರಾದರೆ ಅದನ್ನು ನಿರ್ಲಕ್ಷ ಮಾಡದೇ ತಕ್ಷಣ ಅದಕ್ಕೆ ಚಿಕಿತ್ಸೆ ಪಡೆಯಬೇಕು. ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸುತ್ತಿದೆ ಕಿಡ್ನಿ ಸ್ಟೋನ್ ಆಗಿರುವುದು ಖಚಿತ.
ಮೂತ್ರದಲ್ಲಿ ಬದಲಾವಣೆ:
ಮೂತ್ರ ಪಿಂಡದಲ್ಲಿ ಕಲ್ಲು ಇದ್ದರೆ ಮೂತ್ರ ದುರ್ವಾಸನೆಯಿಂದ ಕೂಡಿರುತ್ತದೆ. ಮತ್ತು ಪದೇ ಪದೇ ಮೂತ್ರಕ್ಕೆ ಹೋಗುವಂತೆ ಪ್ರಚೋದಿಸುತ್ತದೆ.
ನೋವು:
ಮೂತ್ರ ಪಿಡಂದಲ್ಲಿ ಕಲ್ಲುಗಳಿದ್ದರೆ ಬೆನ್ನು ನೋವು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಹೆರಿಗೆ ನೋವಿನಂಥ ಯಮಯಾತನೆಯ ನೋವು ಕೆಳ ಹೊಟ್ಟೆಯ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.
ಜ್ವರ:
ಮೂತ್ರ ಪಿಂಡದಲ್ಲಿ ಕಲ್ಲು ಇದ್ರೆ ಸಾಮಾನ್ಯವಾಗಿ ಕಾಣಿಸಿವ ಮತ್ತೊಂದು ಲಕ್ಷಣ ಎಂದರೆ ಜ್ವರ, ಶೀತ. ವಿಪರೀತ ಎನ್ನವಂತಹ ಜ್ವರ ಕಾಣಿಸಿಕೊಳ್ಳುತ್ತದೆ.
ಮೂತ್ರ:
ಮೂತ್ರ ವಿಸರ್ಜನೆ ಮಾಡುವಾಗ ನೋವು ಕಾಣಿಸುತ್ತದೆ. ಸರಾಗವಾಗಿ ಮೂತ್ರ ಮಾಡಲು ಆಗುವುದಿಲ್ಲ. ಕಿಡ್ನಿ ಸ್ಟೋನ್ ಹೆಚ್ಚಾದರೆ ಮೂತ್ರ ಪೂರ್ತಿ ಕಟ್ಟುತ್ತದೆ.
ವಾಂತಿ:
ಕಿಡ್ನಿ ಸ್ಟೋನ್ ಹೆಚ್ಚಾದರೆ ವಾಂತಿ ಬಂದಂತಾಗುತ್ತದೆ. ಹೊಟ್ಟೆ ತೊಳೆಸಿದಂತಹ ಅನುಭವವಾಗುತ್ತದೆ. ಆದರೆ ವಾಂತಿ ಬರುವುದಿಲ್ಲ.
ಬಾವು ಕಾಣಿಸಿಕೊಳ್ಳುವುದು
ಕಿಡ್ನಿ ದೇಹದ ಹೆಚ್ಚಿನ ತ್ಯಾಜ್ಯ ಮತ್ತು ದ್ರವವನ್ನು ಹೊರಹಾಕುವ ಕೆಲಸ ಮಾಡುತ್ತದೆ.ಕಿಡ್ನಿ ಸಮಸ್ಯೆಯಿಂದ ಕೆಲಸ ಮಾಡುವುದು ನಿಲ್ಲಿಸಿದರೆ ಮುಖ, ಕೈ ಕಾಲುಗಳು ಬಾವು ಕಾಣಿಸಿಕೊಳ್ಳುತ್ತದೆ.