ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಮೆರಿಕದಲ್ಲಿ ಕೋವಿಡ್-19ಗೆ ಬಲಿಯಾದವರ ಸಂಖ್ಯೆ 5 ಲಕ್ಷಕ್ಕೇರಿದೆ. ವಿಶೇಷವೆಂದರೆ ಈ ಸಂಖ್ಯೆಯು ಅಮೆರಿಕವು ಎದುರಿಸಿದ ಮೂರು ಯುದ್ಧಗಳಲ್ಲಿ ಉಂಟಾದ ಅದರ ಸೈನಿಕರ ಸಾವಿಗೆ ಬಹುತೇಕ ಸರಿಸಮನಾಗಿದೆ.
ಅಮೆರಿಕವು ಭಾಗವಹಿಸಿದ್ದ ದ್ವಿತೀಯ ವಿಶ್ವಸಮರ (4,05,0000), ವಿಯೆಟ್ನಾಮ್ ಸಮರ (58,000) ಮತ್ತು ಕೊರಿಯನ್ ಸಮರ (36,0000 ) ದಲ್ಲಿ ಒಟ್ಟು 4 ಲಕ್ಷದ 99 ಸಾವಿರಕ್ಕಿಂತ ಹೆಚ್ಚು ಜನ ಸಾವಿಗೀಡಾಗಿದ್ದರು.
ಇದು ನಮ್ಮ ದೇಶದ ಪಾಲಿಗೆ ಕರಾಳ ದಿನ ಎಂದಿರುವ ಅಧ್ಯಕ್ಷ ಬೈಡೆನ್ ಅವರು, ದುಃಖಸೂಚಕವಾಗಿ ಸರಕಾರಿ ಕಚೇರಿಗಳಲ್ಲಿ ಅಮೆರಿಕದ ಧ್ವಜವನ್ನು ಅರ್ಧ ಮಟ್ಟಕ್ಕೆ ಇಳಿಸುವಂತೆ ಸೂಚಿಸಿದ್ದಾರೆ.
ಪ್ರಸ್ತುತ ಕೋವಿಡ್ಗೆ ಬಲಿಯಾಗಿರುವುದು ಅಮೆರಿಕದಲ್ಲೇ ಹೆಚ್ಚು. ಜಾಗತಿಕ ಸಾವಿನ ಸಂಖ್ಯೆಯ ಶೇ. 2೦ರಷ್ಟು ಸಾವುಗಳು ಅಮೆರಿಕದಲ್ಲೆ ಸಂಭವಿಸಿವೆ.