Ind vs Eng: ಇಬ್ಬರ ಲಕ್ಷ್ಯ ಗೆಲುವೊಂದೇ, ಗೆಲುವಿನ ಗುರಿ ಮುಟ್ಟೋದ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾಗೆ ಸರಣಿ ಗೆಲ್ಲುವುದು ಗುರಿಯಾಗಿದೆ. ಪ್ರವಾಸಿ ಇಂಗ್ಲೆಂಡ್​​ಗೆ ಸರಣಿಯನ್ನು ಗೆದ್ದು ಜೀವಂತವಾಗಿರಿಸಿಕೊಳ್ಳುವ ಹಸಿವನ್ನು ಹೊಂದಿದ್ದಾರೆ. ಇಬ್ಬರಿಗೂ ಗೆಲುವೊಂದೇ ಗುರಿ. ಹಾಗಾದರೆ ಈ ಗೆಲುವಿನ ಗುರಿಯನ್ನು ಯಾರು ಸಾಧಿಸುತ್ತಾರೆ?

4ನೇ ಇಂಡೋ-ಇಂಗ್ಲೆಂಡ್ ಟೆಸ್ಟ್ ಮೆಗಾ ಪಂದ್ಯ ಆರಂಭವಾಗಿದೆ. ಎರಡು ತಂಡಗಳು ಗೆಲುವಿನ ಗುರಿ ಹೊಂದಿರುವ ಈ ರೋಚಕ ಕದನಕ್ಕೆ ರಾಂಚಿಯ JSCA ಅಂತಾರಾಷ್ಟ್ರೀಯ ಕ್ರೀಡಾಂಗಣ ಸಜ್ಜಾಗಿದೆ.

ಸತತ ಎರಡು ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಸರಣಿಯನ್ನು ಜೀವಂತವಾಗಿರಿಸಿಕೊಳ್ಳುವ ಕನಸು ಕಾಣುತ್ತಿರುವ ಇಂಗ್ಲೆಂಡ್, ಭಾರತದ ಗೆಲುವಿನ ಓಟವನ್ನು ಬ್ರೇಕ್ ಹಾಕೋ ಗುರಿ ಹೊಂದಿದೆ.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!