ಮೈದಾನದಲ್ಲೇ‌ ಚಾಹಲ್‌ ಗಲಾಟೆ: ಖ್ಯಾತ ಆಫ್ರಿಕಾ ಆಟಗಾರನಿಗೆ ಒದ್ದ ಲೆಗ್‌ ಸ್ಪಿನ್ನರ್..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಗುವಾಹಟಿಯ ಬರ್ಸಾಪುರ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಚಕ ಪಂದ್ಯ ಅಭಿಮಾನಿಗಳಿಗೆ ಹಲವು ಕಾರಣಕ್ಕೆ ವಿಶೇಷವಾಗಿತ್ತು. ಒಂದೆಡೆ ಟೀಂ ಇಂಡಿಯಾ ಎಲ್ಲಾ ಬ್ಯಾಟರ್‌ ಗಳು ಸ್ಫೋಟಿಸುವ ಮೂಲಕ ಟಿ20 ವರ್ಡ್‌ ಕಪ್‌ ಗೆ ಮುನ್ನ ಇತರೆ ತಂಡಗಳಿಗೆ ದೊಡ್ಡದಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇನ್ನು ಮೆನ್ ಇನ್ ಬ್ಲೂ ಪಡೆ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಬಾರಿಗೆ ದ್ವಿಪಕ್ಷೀಯ ಸರಣಿಯಲ್ಲಿ ಗೆಲ್ಲುವ ಮೂಲಕ ಇತಿಹಾಸವನ್ನು ನಿರ್ಮಿಸಿದೆ. ಪಂದ್ಯದಲ್ಲಿ  ಉಭಯ ತಂಡಗಳು 40 ಓವರ್‌ಗಳಲ್ಲಿ ಒಟ್ಟು 458 ರನ್‌ಗಳನ್ನು ಸಿಡಿಸಿದವು. ಆದರೆ ಅಂತಿಮವಾಗಿ ಟಿಂ ಇಂಡಿಯಾ 16 ರನ್‌ಗಳಿಂದ ರೋಚಕವಾಗಿ ಗೆದ್ದು ಅಭಿಮಾನಿಗಳು ಸಂಭ್ರಮದಲ್ಲಿ ಮಿಂದೇಳುವಂತೆ ಮಾಡಿದೆ.
ಈ ಪಂದ್ಯ ಅಭಿಮಾನಿಗಳ ಮನಸ್ಸಿನಲ್ಲುಳಿಯಲು ಕಾರಣ, ಪಂದ್ಯದಲ್ಲಿ ಹಲವಾರು ವಿನೋದಗಳು ಘಟಿಸಿವೆ.
ಆಟದ ಸಮಯದಲ್ಲಿ ಹಾವೊಂದು ಮೈದಾನಕ್ಕೆ ನುಗ್ಗಿದ್ದರಿಂದ ಆಪ್ರಿಕಾ ಆಟಗಾರರು ಹೌಹಾರಿದ್ದರು. ಆ ವೇಳೆ ಆಟವನ್ನು ಸ್ಥಗಿತಗೊಳಿಸಲಾಗಿತ್ತು. ಫ್ಲಡ್‌ಲೈಟ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸಿದಾಗ, ಮತ್ತೊಮ್ಮೆ ಆಟವನ್ನು ಸ್ಥಗಿತಗೊಳಿಸಲಾಯಿತು. ಈ ವಿರಾಮದ ಸಮಯದಲ್ಲಿ ದಕ್ಷಿಣ ಆಫ್ರಿಕಾ ಪರ ಆಡದ ಸ್ಪಿನ್ನರ್‌ ತರ್ಬೈಜ್ ಶಮ್ಸಿ‌ ಪಾನಿಯ ತಂದು ಮೈದಾನದಲ್ಲಿದ್ದ ಡೇವಿಡ್ ಮಿಲ್ಲರ್, ಕ್ವಿಂಟನ್ ಡಿ ಕಾಕ್ ಮತ್ತು ಭಾರತೀಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಸ್ಪಿನ್ನರ್‌ ಯುಜ್ವೆಂದ್ರ ಚಹಾಲ್ ಏಕಾಏಕಿ ಶಮ್ಸಿ ಕಡೆಗೆ ನುಗ್ಗಿ ಮೊಣಕಾಲಿನಿಂದ ಒದ್ದರು. ಈ ಮೂಲಕ ಚಾಹಲ್‌ ಪಂದ್ಯದಲ್ಲಿ ಆಡದಿದ್ದರೂ ಸುದ್ದಿಯಾದರು.

ಆದರೆ ಚಾಹಲ್‌ ಹೀಗೆ ಮಾಡಿದ್ದು ತಮಾಷೆಗಾಗಿ. ಈ ದೃಶ್ಯವನ್ನು ನೋಡಿದ ಮೈದಾನದಲ್ಲಿದ್ದ ಪ್ರೇಕ್ಷಕರು ಸಹ ಜೋರಾಗಿ ನಕ್ಕಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವೈರಲ್ ಆಗಿದೆ.
ಸದ್ಯ ಕ್ರಿಕೆಟ್‌ ಜಗತ್ತಿನ ಅಗ್ರಗಣ್ಯ ಸ್ಪಿನ್ನರ್‌ ಗಳೆನಿಸಿಕೊಂಡಿರುವ ಈ ಇಬ್ಬರು ಸ್ಪಿನ್ನರ್‌ ಗಳು ಈ ಹಿಂದೆ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 2016 ರಿಂದ 2018 ರ ವರೆಗೆ ಒಟ್ಟಿಗೆ ಆಡಿದ್ದಾರೆ. ತಮಾಷೆಯ ನಡವಳಿಕೆಗಳಿಂದ ಫೇಮಸ್‌ ಆಗಿರುವ ಚಾಹಲ್‌ ಮತ್ತು ಶಮ್ಸಿ ನಡುವೆ ಕ್ಲೋಸ್ ಫ್ರೆಂಡ್‌ ಶಿಪ್‌ ಇದೆ. ಹೀಗಾಗಿಯೇ ಮೈದಾನದಲ್ಲಿ ಗೆಳೆಯರು ತಮಾಷೆ ಮಾಡಿಕೊಂಡಿದ್ದಾರೆ. ಚಾಹಲ್‌ ಚೇಷ್ಠೆಗೆ ಶಮ್ಸಿ ಸಹ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!