ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಾಟದಲ್ಲಿ ಭಾರತವು 157 ರನ್ಗಳ ಅಂತರದಿಂದ ಗೆದ್ದು ಬೀಗಿದೆ. ನಾಲ್ಕನೇ ದಿನದಾಟ ಅಂತ್ಯಕ್ಕೆ ವಿಕಟ್ ಪಡೆಯುವಲ್ಲಿ ವಿಫಲರಾದ ಭಾರತ ತಂಡದ ಬೌಲರ್ಗಳು 5ನೇ ದಿನದಲ್ಲಿ ರೂಟ್ ಪಡೆಯನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ವಿಕೆಟ್ಗೆ ರೊರೆ ಬುರ್ನ್ಸ್ ಹಾಗೂ ಹಸೀಬ್ ಆಹಮದ್ ಜೋಡಿ 100 ರನ್ಗಳ ಜೊತೆಯಾಟ ನಡೆಸಿದ ಭಾರತ, ಗೆಲುವಿನ ಆಸೆ ಕಮರಿಸಿದೆ. ಇಂಗ್ಲೆಂಡ್ ಆರಂಭಿಕ ಆಟಗಾರ ರೊರೆ ಬುರ್ನ್ಸ್ನ್ನು ಆಲ್ರೌಂಡರ್ ಶಾರ್ದುಲ್ ಠಾಕೂರ್ಫೆವಿಲಿಯನ್ಗೆ ಅಟ್ಟುವ ಮೂಲಕ ಇಂಗ್ಲೆಂಡ್ನ ಪತನಕ್ಕೆ ಬುನಾದಿ ಹಾಡಿದರು. ಭಾರತದ ಪರ ಜಸ್ಪೀತ್ ಬೂಮ್ರಾ 2 , ಉಮೇಶ್ ಯಾದವ್ ಗೆ 3 , ರವೀಂದ್ರ ಜಡೇಜಾ 2,ಶಾರ್ದೂಲ್ ಠಾಕೂರ್ 2 ವಿಕೆಟ್ ಪಡೆದು ಮಿಂಚಿದರು. ಇಂಗ್ಲೆಂಡ್ ಪರ ಹಸೀಬ್ ಅಹಮದ್ 63 ರನ್ ಮಾತ್ರ ಗರಿಷ್ಠ ಮೊತ್ತ ದಾಖಲಿಸಿದರು. ಈ ಗೆಲುವಿನ ಮೂಲಕ ಭಾರತ ತಂಡವು 5 ಟೆಸ್ಟ್ ಸರಣಿಯಲ್ಲಿ 2-1 ಮೂಲಕ ಮುನ್ನೆಡೆ ಸಾಧಿಸಿದೆ.
ಪಂದ್ಯಕ್ಕೆ ತಿರುವು ಕೊಟ್ಟ ಬೂಮ್ರಾ ಯಾರ್ಕರ್!
ರೋಚಕ ಘಟ್ಟದಲ್ಲಿದ್ದ ಪಂದ್ಯವು ಒಂದು ಹಂತದಲ್ಲಿ ಇಂಗ್ಲೆಂಡ್ ಗೆಲ್ಲುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿರಲಿಲ್ಲ. ಈ ನಡುವೆ 64ನೇ ಹಾಗೂ 66ನೇ ಓವರ್ ಎಸೆದ ಜಸ್ಪೀತ್ ಬೂಮ್ರಾ ಒಲೈ ಪೂಪೆ ಹಾಗೂ ಬೆಸ್ಟೋ ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವನ್ನು ಖಾತ್ರಿ ಪಡಿಸಿದರು. ಆ ಬಳಿಕ ಸ್ಪಿನ್ ಮಾoತ್ರಿಕ ರವೀಂದ್ರ ಜಡೇಜಾ ಮೊಯಿನ್ ಅಲಿಯ ವಿಕೆಟ್ ಪಡೆದು ಗೆಲುವಿನ ಮೆಟ್ಟಿಲನ್ನು ಸುಲಭವಾಗಿಸಿದರು.