4 ದೇಶಗಳ 12 ನಿರಾಶ್ರಿತರು ರಿಕ್ಕಿ ಕೇಜ್ ನೇತೃತ್ವದಲ್ಲಿ ಜನಗಣಮನ ಹಾಡಿದಾಗ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಭಾರತದ ಮೇಲಿನ ಪ್ರೀತಿ ಪ್ರಪಂಚದಾದ್ಯಂತ ಪಸರಿಸುತ್ತಿದೆ. ಭಾರತದ 75ನೇ ಆಜಾದಿ ಕಾ ಅಮೃತ್ ಮಹೋತ್ಸವದ ಸ್ಮರಣಾರ್ಥ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಮತ್ತು ನಾಲ್ಕು ರಾಷ್ಟ್ರಗಳ 12 ನಿರಾಶ್ರಿತ ಗಾಯಕರು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದರು. ಸಂಸ್ಕೃತಿ ಸಚಿವಾಲಯ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಿದೆ. ವೈರಲ್ ಆಗಿರುವ ವೀಡಿಯೊವನ್ನು ಇದುವರೆಗೆ 272.3k ಮಂದಿ ವೀಕ್ಷಿಸಿದ್ದಾರೆ.

ರಿಕಿ ಕೇಜ್ ಜೊತೆ ಮ್ಯಾನ್ಮಾರ್ ನಿರಾಶ್ರಿತರಾದ ಔರಾ ರೆಮ್ ಮಾವಿ, ಲೆನ್ ನುವಾಮ್, ವಿಕ್ಟರ್, ಮರಿಯಾ, ಮುವಾನ್ಪಿ, ಚಾನ್ ಚಾನ್ ಸಹ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ದಿಸಾಂತನಾ (ಶ್ರೀಲಂಕಾ ನಿರಾಶ್ರಿತರು), ಒಡೆಟ್ಟೆ ( ಕ್ಯಾಮರೂನ್ ನಿರಾಶ್ರಿತರು) ಮತ್ತು ಅಬ್ದುಲ್ಲಾ, ಅಕಿಲಾ ಮತ್ತು ಚೆಯಾಸ್ (ಅಫ್ಘಾನ್ ನಿರಾಶ್ರಿತರು) ಸಹ ಗೌರವದ ಭಾಗವಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!