ಜಾಗತಿಕ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್‌ಗಳಲ್ಲಿ 5 ಶೇಕಡಾ ಭಾರತದಲ್ಲೇ ಆಗಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತವು ಸ್ಮಾರ್ಟ್‌ ಫೋನ್ ಗಳ ಅತಿದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದ್ದು ಆಪಲ್‌, ಸ್ಯಾಮ್‌ಸಂಗ್‌, ಶಿಯೋಮಿ, ಒಪ್ಪೋ, ವೀವೋ, ಒನ್‌ಪ್ಲಸ್‌ ಸೇರಿದಂತೆ ಬಹುತೇಕ ದೊಡ್ಡ ದೊಡ್ಡ ಕಂಪನಿಗಳು ಭಾರತವನ್ನು ತಮ್ಮ ಅತಿದೊಡ್ಡ ಮಾರುಕಟ್ಟೆ ಎಂದಿದ್ದಾರೆ. ಅದರಲ್ಲೂ ಭಾರತದಲ್ಲಿ 4ಜಿ ಕ್ರಾಂತಿ ನಂತರ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು ಇದು ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್‌ಗಳಲ್ಲಿ ತೀವ್ರ ಹೆಚ್ಚಳಕ್ಕೆ ಕಾರಣವಾಗಿದೆ.

2022 ರಲ್ಲಿ, ಭಾರತೀಯ ಬಳಕೆದಾರರು ತಮ್ಮ ಫೋನ್‌ಗಳಲ್ಲಿ 28 ಬಿಲಿಯನ್‌ ಗಳಷ್ಟು ಸಂಖ್ಯೆಯಲ್ಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ್ದಾರೆ. ಜಾಗತಿಕವಾಗಿ ಒಟ್ಟಾರೆ 625 ಬಿಲಿಯನ್‌ ಡೌನ್ಲೋಡ್‌ ಗಳಾಗಿದ್ದು ಇದರಲ್ಲಿ 5 ಶೇಕಡಾದಷ್ಟು ಪಾಲು ಭಾರತೀಯರದ್ದು ಎಂದು ವಿಶ್ಲೇಷಣಾ ಸಂಸ್ಥೆ Data.ai ವರದಿ ಮಾಡಿದೆ. ರದಿಯ ಪ್ರಕಾರ, ವರ್ಷದಲ್ಲಿ ಒಟ್ಟಾರೆ ಅಪ್ಲಿಕೇಶನ್ ಡೌನ್‌ಲೋಡ್‌ಗಳ ವಿಷಯದಲ್ಲಿ ಭಾರತವು ಚೀನಾದ ನಂತರ ಎರಡನೇ ಸ್ಥಾನದಲ್ಲಿದೆ. 2022 ರಲ್ಲಿ ಭಾರತದಲ್ಲಿ ಪ್ರತಿ ಗ್ರಾಹಕನು ದಿನಕ್ಕೆ ಸರಾಸರಿ 4.9 ಗಂಟೆಗಳ ಕಾಲ ಮೊಬೈಲ್‌ ಬಳಸಿದ್ದಾನೆ. 2022 ರಲ್ಲಿ ಆನ್‌ಲೈನ್ ಶಾಪಿಂಗ್ ಅಪ್ಲಿಕೇಶನ್‌ಗಳಲ್ಲಿ ಜಾಗತಿಕವಾಗಿ ಖರ್ಚು ಮಾಡಿದ 110 ಬಿಎನ್ ಗಂಟೆಗಳಲ್ಲಿ, ಭಾರತೀಯರು 8.7 ಬಿಲಿಯನ್ ಗಂಟೆಗಳನ್ನು ಕಳೆದಿದ್ದಾರೆ ಎಂದೂ ವರದಿಗಳು ಉಲ್ಲೇಖಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!