ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮೂಲದ ಲೀನಾ ನಾಯರ್ ಫ್ರಾನ್ಸ್ನ ಪ್ರತಿಷ್ಠಿತ ಫ್ಯಾಷನ್ ಸಂಸ್ಥೆ ‘ಚಾನೆಲ್’ಗೆ ಜಾಗತಿಕ ಮಟ್ಟದ ಕಾರ್ಯನಿರ್ವಾಹಕ ಅಧಿಕಾರಿಯಾಗಿ( ಸಿಇಒ) ಆಯ್ಕೆಯಾಗಿದ್ದಾರೆ.
ಲೀನಾ ಪ್ರಸ್ತುತ ಯೂನಿಲಿವರ್ ಸಂಸ್ಥೆಯ ಮೊದಲ ಮಹಿಳಾ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 2022 ಜನವರಿಯಿಂದ ಚಾನೆಲ್ ಸಂಸ್ಥೆ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಲೀನಾ ನಾಯರ್ 30 ವರ್ಷಗಳ ಹಿಂದೆ ಯುನಿಲಿವರ್ನಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ಟ್ವೀಡ್ ಸೂಟ್ಗಳು, ಕ್ವಿಲೆಟ್ ಹ್ಯಾಂಡ್ಬ್ಯಾಗ್ಗಳು ಮತ್ತು ಸುಗಂಧದ್ರವ್ಯಗಳಿಗೆ ‘ಚಾನೆಲ್’ ಹೆಸರುವಾಸಿಯಾಗಿದೆ.