ಐಸಿಸಿ ಮಹಿಳಾ ವಿಶ್ವಕಪ್​: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಐಸಿಸಿ ಮಹಿಳಾ ವಿಶ್ವಕಪ್​ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ 6 ವಿಕೆಟ್​ಗಳ ಸೋಲು ಕಂಡಿದ್ದು, ಈ ಮೂಲಕ . ಸೆಮಿಫೈನಲ್ ಪ್ರವೇಶಿಸುವ ಕನಸು ಮತ್ತಷ್ಟು ಕಠಿಣವಾಗಿದೆ.
ಟೂರ್ನಿಯಲ್ಲಿ ಸತತ 5ನೇ ಗೆಲುವಿನೊಂದಿಗೆ ಕಾಂಗರೂ ಪಡೆ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು.
ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 7 ವಿಕೆಟ್ ಕಳೆದುಕೊಂಡು 277 ರನ್​ ಗಳಿಸಿತ್ತು. ಯಸ್ತಿಕಾ ಭಾಟಿಯಾ 83 ಎಸೆತಗಲ್ಲಿ 6 ಬೌಂಡರಿ ಸಹಿತ 59 ರನ್​, ಮಿಥಾಲಿ ರಾಜ್ 96 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 68 ರನ್, ಹರ್ಮನ್​ಪ್ರೀತ್ ಕೌರ್​ 47 ಎಸೆತಗಳಲ್ಲಿ 6 ಬೌಂಡರಿ ಸಹಿತ 57 ರನ್​ ಮತ್ತು ಪೂಜಾ ವಸ್ತ್ರಾಕರ್​ 28 ಎಸೆತಗಳಲ್ಲಿ 34 ರನ್​ಗಳಿಸಿದರು.
ಇನ್ನು 278 ರನ್​ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಇನ್ನು 3 ಎಸೆತಗಳಿರುವಂತೆ ಗುರಿ ತಲುಪಿತು.
ರಚೇಲ್ ಹೇನ್ಸ್​ 53 ಎಸೆತಗಳಲ್ಲಿ 43, ಅಲಿಸಾ ಹೀಲಿ 65 ಎಸೆತಗಳಲ್ಲಿ 9 ಬೌಂಡರಿ ಸಹಿತ 72, ನಾಯಕಿ ಮೆಗ್​ ಲ್ಯಾನಿಂಗ್ 107 ಎಸೆತಗಳಲ್ಲಿ 13 ಬೌಂಡರಿ ಸಹಿತ 97, ಎಲಿಸ್​ ಪೆರ್ರಿ 51 ಎಸೆತಗಳಲ್ಲಿ 28, ಬೆತ್ ಮೂನಿ 20 ಎಸೆತಗಳಲ್ಲಿ ಅಜೇಯ 30 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!