spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

8ನೇ ಬಾರಿಗೆ SAFF ಫುಟ್ ಬಾಲ್ ಚಾಂಪಿಯನ್ ಶಿಪ್ ಟ್ರೋಫಿಗೆ ಮುತ್ತಿಟ್ಟ ಭಾರತ!

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತೀಯ ಫುಟ್ ಬಾಲ್ ತಂಡ 8ನೇ ಬಾರಿಗೆ ದಕ್ಷಿಣ ಏಷ್ಯಾದ ಫುಟ್ ಬಾಲ್ ಫೆಟರೇಷನ್(ಸ್ಯಾಫ್) ನ ಚಾಂಪಿಯನ್ ಆಗಿ ಗೆದ್ದು ಬೀಗಿದೆ.
ಸ್ಯಾಫ್ ನ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಮಾಲ್ಡೀವ್ಸ್ ತಂಡವನ್ನು ಮಣಿಸಿ ಫಿನಾಲೆ ತಲುಪಿದ್ದ ಭಾರತ, ಫೈನಲ್ಸ್ ನಲ್ಲಿ ನೇಪಾಳವನ್ನು ಸೋಲಿಸಿ ಚಾಂಪಿಯನ್ ಶಿಪ್ ಟ್ರೋಫಿಗೆ ಮುತ್ತಿಟ್ಟಿದೆ.
ಮಳೆಯ ನಡುವೆಯೂ ಆರಂಭವಾದ ಪಂದ್ಯದಲ್ಲಿ ಉಭಯ ತಂಡಗಳ ಸಮಬಲದ ಹೋರಾಟ ನೀಡಿದವು. ಈ ವೇಳೆ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರ ಅಂತಾರಾಷ್ಟ್ರೀಯ ಪಂದ್ಯಗಳ ಗೋಲನ್ನು ಹಿಂದಿಕ್ಕಿ ಸುನಿಲ್ ಚೆಟ್ರಿ ಸಾಧನೆ ಮಾಡಿದ್ದಾರೆ.
ಇದೀಗ ಅಂತಾರಾಷ್ಟ್ರೀಯ ಫುಟ್ ಬಾಲ್ ನ ಸಕ್ರಿಯ ಆಟಗಾರರ ಎರಡನೇ ಅತೀ ಹೆಚ್ಚು ಗೋಲು ಗಳಿಸಿದ ದಾಖಲೆಗೆ ಚೆಟ್ರಿ ಕೂಡ ಪಾಲು ಹೊಂದಿದ್ದಾರೆ. ಭಾರತೀಯ ಫುಟ್​ಬಾಲ್ ತಂಡದ ಮುಖ್ಯ ಕೋಚ್ ಆದ ಬಳಿಕ ಇಗರ್‌ ಸ್ಟಿಮ್ಯಾಕ್ ಗೆದ್ದ ಮೊದಲ ಅಂತಾರಾಷ್ಟ್ರೀಯ ಟೂರ್ನಿಯ ಗೆಲುವು ಇದಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss