Thursday, August 11, 2022

Latest Posts

ಗಡಿ ನಿಯಂತ್ರಣಾ ರೇಖೆಯಲ್ಲಿ ಭಾರತ-ಪಾಕ್ ಸೈನಿಕರಿಂದ ಈದ್​ ಆಚರಣೆ: ಪರಸ್ಪರ ಸಿಹಿ ಹಂಚಿ, ಶುಭಾಶಯ ಕೋರಿಕೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಈದ್ ಉಲ್ ಫಿತರ್​ ಹಬ್ಬದ ನಿಮಿತ್ತ ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣಾ ರೇಖೆ (ಎಲ್​ಒಸಿ) ಬಳಿ ಇಂದು ಭಾರತ ಮತ್ತು ಪಾಕಿಸ್ತಾನ ಸೇನೆ ಯೋಧರು ಪರಸ್ಪರ ಸಿಹಿ ಹಂಚಿಕೊಂಡು, ಶುಭಾಶಯ ಕೋರಿದರು.
ಇಲ್ಲಿ ಈದ್​, ಹೋಳಿ, ದೀಪಾವಳಿ ಸೇರಿ ಹಿಂದು ಮತ್ತು ಮುಸ್ಲಿಮರ ಹಬ್ಬದ ದಿನ ಗಡಿಯಲ್ಲಿ ಎರಡೂ ದೇಶಗಳ ಯೋಧರು ಸಿಹಿ ಹಂಚಿಕೊಂಡು, ಶುಭಾಶಯ ಕೋರುವುದು ಸಾಮಾನ್ಯ.
ವಿಶೇಷ ಹಬ್ಬಗಳ ದಿನದಂದು ಕುಪ್ವಾರಾದ ಟ್ಯಾಂಗ್​ಧರ್​ನಲ್ಲಿರುವ ಕಿಶನ್​ಗಂಗಾ ನದಿಯ ತಿತ್ವಾಲ್​ ಕ್ರಾಸಿಂಗ್ ಮತ್ತು ಉರಿಯಲ್ಲಿರುವ ಕಮಾನ್​ ಅಮನ್​ ಸೇತುವೆಯ ಬಳಿ ಎರಡೂ ದೇಶಗಳ ಯೋಧರು ಸೇರಿ ಹಬ್ಬ ಆಚರಿಸುತ್ತಾರೆ. ಹಾಗೇ ಇಂದು ಪಾಕಿಸ್ತಾನ ಸೇನೆ ಸೈನಿಕರು ಪೂಂಚ್​ನ ಗಡಿ ನಿಯಂತ್ರಣಾ ರೇಖೆ ಬಳಿಯೂ ಕೂಡ ಭಾರತೀಯ ಯೋಧರಿಗೆ ಸಹಿ ಹಂಚಿದೆ. ಅದಕ್ಕೆ ಪ್ರತಿಯಾಗಿ ನಮ್ಮ ಯೋಧರೂ ಕೂಡ ಅವರಿಗೆ ಶುಭಕೋರಿದ್ದಾರೆ.
ಗಡಿನಿಯಂತ್ರಣ ರೇಖೆಯ ಬಳಿ ಗುಂಡಿನ ಶಬ್ದ ಸಾಮಾನ್ಯ. ಇತ್ತೀಚೆಗೆ ಹಲವು ದಿನಗಳಿಂದ ಗಡಿಯ ಬಳಿ ಪರಸ್ಪರ ಗುಂಡಿನ ದಾಳಿ ತುಸು ಕಡಿಮೆಯಾಗಿದೆ. ಇನ್ನು ಹೀಗೆ ಸಿಹಿ ಹಂಚುವಾಗ ಕೊರೋನಾ ನಿಯಂತ್ರಣಕ್ಕೆ ಸಂಬಂಧಪಟ್ಟ ಎಲ್ಲ ಶಿಷ್ಟಾಚಾರಗಳನ್ನೂ ಪಾಲಿಸಲಾಗಿದೆ ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss