Wednesday, August 10, 2022

Latest Posts

ಲಸಿಕೆ ಸೆಂಚುರಿ: ಪಾರಂಪರಿಕ ತಾಣಗಳಿಗೆ ತ್ರಿವರ್ಣ ದೀಪಾಲಂಕಾರದ ಚಿತ್ತಾರ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೋವಿಡ್‌ ಲಸಿಕೆ ಹಾಕಲು ಆರಂಭಿಸಿ ಸುಮಾರು 9 ತಿಂಗಳಲ್ಲಿ 100 ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ನಿನ್ನೆ ಹೊಸ ದಾಖಲೆ ಬರೆದಿದೆ.

ಈ ಹೆಮ್ಮೆಯ ಕ್ಷಣವನ್ನು  ಭಾರತೀಯ ಸಂಸ್ಕೃತಿ ಸಚಿವಾಲಯದ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಿಭಿನ್ನವಾಗಿ ಆಚರಿಸಿದೆ. ದೇಶದ 100 ಪ್ರಮುಖ ಪಾರಂಪರಿಕ ತಾಣಗಳಿಗೆ ಅಕ್ಟೋಬರ್ 21ರ ರಾತ್ರಿ ಕೇಸರಿ ,ಬಿಳಿ, ಹಸಿರು ಬಣ್ಣದ ದೀಪಾಲಂಕಾರ ಮಾಡಿ ಸಂಭ್ರಮಿಸಿದೆ.

ಈ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕೊರೋನಾ ವಾರಿಯರ್ಸ್ ಗೆ ಗೌರವ ಸಲ್ಲಿಸಿದ್ದಾರೆ.

ದೀಪಾಲಂಕಾರ ಮಾಡಲಾಗಿದ್ದ ಪಾರಂಪರಿಕ ತಾಣ…

ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಾದ ದೆಹಲಿಯ ಕೆಂಪುಕೋಟೆ, ಹುಮಾಯೂನ್​ ಸಮಾಧಿ, ಕುತುಬ್​ ಮಿನಾರ್​, ಉತ್ತರಪ್ರದೇಶದ ಆಗ್ರಾ ಕೋಟೆ, ಫತೇಪುರ್​ ಸಿಕ್ರಿ, ಗೋವಾದ ಸೇಂಟ್​ ಫ್ರಾನ್ಸಿಸ್​ ಆಫ್​ ಅಸ್ಸಿಸಿ ಚರ್ಚ್​, ಒಡಿಶಾದ ಕೋನಾರ್ಕ್​ ದೇವಾಲಯ, ತಮಿಳುನಾಡಿನ ಮಲ್ಲಪುರಂರಥ ದೇವಾಲಯ,  ರಾಜಸ್ಥಾನದ ಚಿತ್ತೋರ್, ಕುಂಭಲ್ಗಡ್​ ಕೋಟೆಗಳು, ಬಿಹಾರದ ನಳಂದ ವಿಶ್ವವಿದ್ಯಾಲಯದ ಉತ್ಖನನ ಅವಶೇಷಗಳು, ಗುಜರಾತ್​​​ನ ಧೋಲವೀರ ಸೇರಿದಂತೆ ಇತ್ಯಾದಿಗಳಿಗೆ ತ್ರಿವರ್ಣ ದೀಪಾಲಂಕಾರ ಮಾಡಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss