Monday, August 8, 2022

Latest Posts

ಜಮೈಕಾ ದೇಶಕ್ಕೆ ವ್ಯಾಕ್ಸಿನ್ ತಲುಪಿಸಿದ ಭಾರತ: ಪ್ರಧಾನಿ ಮೋದಿಗೆ ವಿಡಿಯೋ ಸಂದೇಶ ಕಳುಹಿಸಿದ ಕ್ರಿಕೆಟಿಗ ಆಂಡ್ರೆ ರಸೆಲ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

‘ವಾಕ್ಸಿನ್​ಮೈತ್ರಿ’ಯ ಅಡಿಯಲ್ಲಿ ಭಾರತವು ಜಮೈಕಾ ದೇಶಕ್ಕೆ ಕೊರೋನಾ ಲಸಿಕೆಗಳನ್ನು ಕಳುಹಿಸಿದ್ದು, ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ಆಲ್ರೌಂಡರ್ ಕಿಕೆಟ್ ಆಟಗಾರ ಆಂಡ್ರೆ ರಸೆಲ್ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

ಈ ಬಗೆಗಿನ ರಸೆಲ್​ರ ವಿಡಿಯೋ ಸಂದೇಶವನ್ನುಜಮೈಕಾದ ಕಿಂಗ್​ಸ್ಟನ್​ನಲ್ಲಿರುವ ಭಾರತೀಯ ಹೈ ಕಮಿಷನ್ ಟ್ವಿಟರ್​ನಲ್ಲಿ ಶೇರ್ ಮಾಡಿದ್ದು, ರಸೆಲ್​ ಕೊರೋನಾ ಲಸಿಕೆಯನ್ನು ಕಳುಹಿಸಿರುವುದಕ್ಕೆ ಆತ್ಮೀಯವಾಗಿ “ಎ ಬಿಗ್​ ಬಿಗ್ ಬಿಗ್ ಥ್ಯಾಂಕ್ಯೂ’ ಹೇಳಿದ್ದಾರೆ.

ಕೊರೋನಾ ಬಿಕ್ಕಟ್ಟಿನಿಂದ ಬಚಾವ್ ಆಗಬೇಕೆಂದರೆ ಕೊರೋನಾ ಲಸಿಕೆಯ ಪಾತ್ರ ದೊಡ್ಡದಿದೆ.  ಭಾರತದ ಕೊರೋನಾ ಲಸಿಕೆ ಜಮೈಕಾ ತಲುಪಿದೆ. ಇಲ್ಲಿನ ಜನ ಇದನ್ನು ತುಂಬಾ ಪ್ರಶಂಸಿಸುತ್ತಾರೆ. ಈಗ ಭಾರತ- ಜಮೈಕಾ ಸಹೋದರರು ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss