Tuesday, July 5, 2022

Latest Posts

ಉತ್ಪಾದಕರ ಮನಗೆದ್ದ ಭಾರತ: ಅಮೆರಿಕವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿತ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತ ವಿಶ್ವದಲ್ಲಿನ ಉತ್ಪಾದಕರು ಬಯಸುವ ಹಾಗೂ ಆದ್ಯತೆ ನೀಡುವ ಉತ್ಪಾದನಾ ತಾಣವಾಗಿ ಹೊರಹೊಮ್ಮಿದೆ. ವಿಶ್ವದ ದೊಡ್ಡಣ್ಣ ಅಮೆರಿಕವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದಿದೆ ಎಂದು ಜಾಗತಿಕ ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆ ಕಶ್‌ಮನ್‌ & ವೇಕ್‌ಫೀಲ್ಡ್ ತಿಳಿಸಿದೆ.
ಚೀನಾ ಮೊದಲ ಸ್ಥಾನವನ್ನು ಕಾಯ್ದಿರಿಸಿಕೊಂಡಿದ್ದು, ಯುರೋಪ್‌, ಉತ್ತರ ಮತ್ತು ದಕ್ಷಿಣ ಅಮೆರಿಕ, ಏಷ್ಯಾ-ಪೆಸಿಫಿಕ್ ಪ್ರದೇಶದ 47 ದೇಶಗಳನ್ನು ಸಂಸ್ಥೆಯು ಪರಿಗಣಿಸಿದೆ.
ಕೋವಿಡ್ ಸಾಂಗ್ರಾಮಿಕದ ಅವಧಿಯಲ್ಲೂ ಭಾರತ ಉದ್ಯಮಿಗಳನ್ನು ಆಕರ್ಷಿಸಿದ್ದು, ವಿಶ್ವಮಟ್ಟದಲ್ಲಿ 2ನೇ ಸ್ಥಾನ ಪಡೆದಿದೆ. ಇದರಿಂದ ಭಾರತ ತನ್ನ ಉದ್ಯಮಿಗಳು ಭಾರತದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವುದನ್ನು ತೋರಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಈ ವರ್ಷದ ಜಾಗತಿಕ ಸೂಚ್ಯಾಂಕದಲ್ಲಿ ಚೀನಾ ಅಗ್ರಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಭಾರತ, ಅಮೆರಿಕ ಮೂರನೇ ಸ್ಥಾನ ಪಡೆದಿದೆ. ಕೆನಡಾ, ಚೆಕ್ ಗಣರಾಜ್ಯ, ಇಂಡೋನೇಷ್ಯ ರಾಷ್ಟ್ರಗಳು ನಂತರ ಸ್ಥಾನಗಳನ್ನು ಪಡೆದುಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss